ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆವಿಎನ್ ನಿರ್ಮಾಣದ ಈ ಚಿತ್ರಕ್ಕೆ ಮೊದಲು ‘U/A 16+’ ಪ್ರಮಾಣಪತ್ರ ನೀಡಲು ನಿರ್ಧರಿಸಿದ್ದ ಸೆನ್ಸಾರ್ ಮಂಡಳಿ, ನಂತರ ತನ್ನ ನಿರ್ಧಾರ ಬದಲಿಸಿತ್ತು. ಮಂಡಳಿಯು ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಚಿತ್ರತಂಡ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಮದ್ರಾಸ್ ಹೈಕೋರ್ಟ್ ಮೊದಲು ಸಿನಿಮಾ ಪರವಾಗಿ ತೀರ್ಪು ನೀಡಿತ್ತಾದರೂ, ಅದೇ ದಿನ ಸಂಜೆ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿತು. ಜ. 20ರಂದು ನಡೆದ ಡಿವಿಷನ್ ಬೆಂಚ್ ವಿಚಾರಣೆಯಲ್ಲೂ ಯಾವುದೇ ಅಂತಿಮ ತೀರ್ಪು ಹೊರಬಂದಿಲ್ಲ.
ಜನವರಿ 6ರಂದೇ ಸಿನಿಮಾವನ್ನು ಪುನರ್ ವಿಮರ್ಶಾ ಸಮಿತಿಗೆ ಕಳುಹಿಸುವ ಬಗ್ಗೆ ತಂಡಕ್ಕೆ ತಿಳಿಸಲಾಗಿತ್ತು, ಆದರೆ ತಂಡ ಇದನ್ನು ಪ್ರಶ್ನಿಸಿರಲಿಲ್ಲ ಎಂದು ವಾದಿಸಿದೆ.
ಕೇವಲ ಒಬ್ಬ ವ್ಯಕ್ತಿ ನೀಡಿದ ದೂರಿನಿಂದ ಇಷ್ಟೆಲ್ಲಾ ಸಮಸ್ಯೆಯಾಗುತ್ತಿದೆ. ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದ ದೃಶ್ಯವನ್ನೂ ಈಗಾಗಲೇ ಕತ್ತರಿಸಲಾಗಿದೆ ಎಂದು ತಂಡ ಸ್ಪಷ್ಟಪಡಿಸಿದೆ.
ಪೂರ್ವಯೋಜನೆಯಂತೆ ಜನವರಿ 9ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಈಗ ಜನವರಿ 26ರ ಗಣರಾಜ್ಯೋತ್ಸವದಂದು ಬಿಡುಗಡೆ ಮಾಡುವ ಆಸೆ ಚಿತ್ರತಂಡಕ್ಕಿದೆ. ಆದರೆ, ವಿಜಯ್ ಅವರು ರಾಜಕೀಯ ಪಕ್ಷ ಸ್ಥಾಪಿಸಿರುವುದರಿಂದ, ಒಂದು ವೇಳೆ ಈ ನಡುವೆ ತಮಿಳುನಾಡು ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದರೆ ಚಿತ್ರದ ಬಿಡುಗಡೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.


