January21, 2026
Wednesday, January 21, 2026
spot_img

HAIR CARE | ರೇಷ್ಮೆಯಂಥ ಕೂದಲಿದ್ರೂ ಕಂಡೀಷನರ್‌ ಬಳಸಲೇಬೇಕು, ಯಾಕೆ ನೋಡಿ..

ಡ್ರೈ ಹಾಗೂ ರಫ್‌ ಕೂದಲಿರುವವರಿಗೆ ಶಾಂಪೂ ನಂತರ ಕಂಡೀಷನರ್‌ ಕಡ್ಡಾಯ. ಹಾಗೆಯೇ ಸ್ಮೂತ್‌ ಹಾಗೂ ಸಿಲ್ಕಿ ಕೂದಲಿರುವವರು ಕೂಡ ಕಂಡೀಷನರ್‌ ಬಳಕೆ ಮಾಡಲೇಬೇಕು. ಯಾಕೆ ಗೊತ್ತಾ?

ಇಡೀ ದೇಹ ಹೇಗೆ ಹೈಡ್ರೇಟ್‌ ಆಗಿ ಇರಬೇಕೋ ಹಾಗೆ ಕೂದಲು ಕೂಡ ಹೈಡ್ರೇಟ್‌ ಆಗಿರಬೇಕು. ಕಂಡೀಷನರ್‌ ಕೂದಲಿಗೆ ಬೇಕಾದ ಹೈಡ್ರೇಷನ್‌ ನೀಡುತ್ತದೆ. ಮಾಯಿಶ್ಚರ್‌ ಲಾಕ್‌ ಆಗಲು ಸಹಾಯ ಮಾಡುತ್ತದೆ.

ಎಷ್ಟೇ ಸಿಲ್ಕಿಯಾದ ಕೂದಲಿದ್ದರೂ ಸಿಕ್ಕು ಆಗೇ ಆಗುತ್ತದೆ. ಕಂಡೀಷನರ್‌ ಬಳಕೆಯಿಂದ ಕೂದಲು ಸಿಕ್ಕಾಗೋದಿಲ್ಲ. ಅಂದರೆ ಸಿಕ್ಕು ಕಡಿಮೆ, ಕೂದಲು ಉದುರುವಿಕೆ ಕಡಿಮೆ.

ಸಾಫ್ಟ್‌ ಕೂದಲಲ್ಲಿ ಫ್ರಿಜ್‌ ಇದ್ದರೆ ಅದನ್ನು ಕಂಡೀಷನರ್‌ ಕಡಿಮೆ ಮಾಡುತ್ತದೆ. ಫ್ರಿಜ್‌ ಎಂದರೆ ಕೂದಲು ಹರಡುವಿಕೆ.

ಸದಾ ಕಂಡೀಷನರ್‌ ಬಳಕೆ ಮಾಡುವುದರಿಂದ ನಿಮ್ಮ ಕೂದಲು ಕವಲು ಒಡೆಯುವುದಿಲ್ಲ. ದಪ್ಪ, ದೃಢ ಹಾಗೂ ಶೈನ್‌ ಇರುವ ಕೂದಲು ನಿಮ್ಮದಾಗುತ್ತದೆ.

ಬಳಸೋದು ಹೇಗೆ?
ಯಾವ ಬ್ರಾಂಡ್‌ನ ಶಾಂಪೂ ಬಳಕೆ ಮಾಡುತ್ತಿದ್ದೀರೋ ಅದೇ ಬ್ರಾಂಡ್‌ನ ಕಂಡೀಷನರ್‌ ಬಳಕೆ ಮಾಡುವುದು ಸೂಕ್ತ. ಎರಡು ಬಾರಿ ಶಾಂಪೂ ಮಾಡಿ ಕೂದಲು ಕ್ಲೀನ್‌ ಆದ ನಂತರ ಕೂದಲಿನ ತುದಿಗೆ ಕಂಡೀಷನರ್‌ ಹಚ್ಚಿ. ಬುಡಕ್ಕೆ ತಾಗಿದರೆ ಹೊಟ್ಟಿನ ಸಮಸ್ಯೆ ಎದುರಾಗುತ್ತದೆ. ಬರೀ ಕೂದಲಿಗೆ ಹಚ್ಚಿ. ಎರಡರಿಂದ ಮೂರು ನಿಮಿಷದ ನಂತರ ವಾಶ್‌ ಮಾಡಿ.

Must Read