September 14, 2026
Monday, September 14, 2026
spot_img

ಇಂಡಕ್ಷನ್ ಸ್ಟವ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌: 300% ಬೇಡಿಕೆ ಹೆಚ್ಚಳವಾಗಿದ್ಯಂತೆ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಇದರ ಪರಿಣಾಮವಾಗಿ ಇಂಡಕ್ಷನ್ ಸ್ಟವ್‌ಗಳ ಖರೀದಿ ಅಚಾನಕ್ ಹೆಚ್ಚಾಗಿದೆ. ಕಳೆದ ಮೂರುರಿಂದ ನಾಲ್ಕು ದಿನಗಳಲ್ಲಿ ಈ ಎಲೆಕ್ಟ್ರಿಕ್ ಒಲೆಗಳ ಬೇಡಿಕೆ ಸುಮಾರು 300 ಶೇಕಡಾ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಅಮೆಜಾನ್, ಫ್ಲಿಪ್‌ಕಾರ್ಟ್, ಬ್ಲಿಂಕಿಟ್, ಝೆಪ್ಟೋ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮುಂತಾದ ಆನ್‌ಲೈನ್ ವೇದಿಕೆಗಳಲ್ಲಿ ಜನರು ಇಂಡಕ್ಷನ್ ಸ್ಟವ್‌ಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಹೆಚ್ಚಿದ ಬೇಡಿಕೆಯ ಕಾರಣ ಅನೇಕ ಬ್ರ್ಯಾಂಡ್‌ಗಳ ಉತ್ಪನ್ನಗಳು ಸ್ಟಾಕ್‌ಔಟ್ ಆಗಿವೆ. ಕೆಲವೇ ಬ್ರ್ಯಾಂಡ್‌ಗಳ ಮಾದರಿಗಳು ಮಾತ್ರ ಕೆಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವುದು ಕಂಡುಬಂದಿದೆ.

ಇದನ್ನೂ ಓದಿ:

ಫ್ಲಿಪ್‌ಕಾರ್ಟ್‌ನಲ್ಲಿ ಕಳೆದ ಕೆಲವೇ ದಿನಗಳಲ್ಲಿ ಇಂಡಕ್ಷನ್ ಸ್ಟವ್ ಮಾರಾಟ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ತಿಂಗಳಿಗೆ ಮಾರಾಟವಾಗುತ್ತಿದ್ದಷ್ಟು ಸ್ಟವ್‌ಗಳು ಈಗ ಒಂದು ದಿನದಲ್ಲೇ ಮಾರಾಟವಾಗುತ್ತಿರುವುದು ಬೇಡಿಕೆಯ ತೀವ್ರತೆಯನ್ನು ತೋರಿಸುತ್ತದೆ. ದೆಹಲಿಯಲ್ಲಿ ಮಾತ್ರವೇ ಈ ಉತ್ಪನ್ನಗಳ ಮಾರಾಟ ಕಳೆದ ಎರಡು ದಿನಗಳಲ್ಲಿ ಸುಮಾರು 75 ರಿಂದ 80 ಶೇಕಡಾ ಹೆಚ್ಚಾಗಿದೆ ಎಂದು ವರದಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !