ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಅಂಬಾಜಿ ಬಳಿ ಬಸ್ ಸೇರಿದಂತೆ ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಕನಿಷ್ಠ 38 ಜನರು ಗಾಯಗೊಂಡಿದ್ದಾರೆ.
ಸಿವಿಲ್ ಅಧೀಕ್ಷಕ ಡಾ.ಕೆ.ಕೆ.ಸಿಂಗ್ ಪ್ರಕಾರ, ಗಾಯಗೊಂಡ 38 ಮಂದಿಯಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪಾಲಂಪುರಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂಬಾಜಿ ಮತ್ತು ದಾಂತಾ ನಡುವೆ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ವಾಹನಗಳು ಪಲ್ಟಿಯಾಗಿವೆ ಎಂದು ಸಿಂಗ್ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂದು ಐಷಾರಾಮಿ ಬಸ್ ಮತ್ತು ಎರಡು ವಾಹನಗಳು ಪಲ್ಟಿಯಾಗಿದೆ. 32 ಮಂದಿ ಗಾಯಗೊಂಡಿದ್ದಾರೆ, 6 ಮಂದಿ ಗಂಭೀರವಾಗಿದ್ದು, ಪಾಲಂಪುರಕ್ಕೆ ಕಳುಹಿಸಲಾಗಿದೆ. ಇತರರಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದೆ” ಎಂದು ಸಿಂಗ್ ಹೇಳಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.