ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಖ್ಯಾತ ಸೀರಿಯಲ್ ನಟಿ ನೇಹಾ ಗೌಡ ತಮ್ಮ ಮಗುವಿನ ಫೋಟೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಎಷ್ಟೋ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಫೋಟೊಗಳನ್ನು ಹಂಚಿಕೊಳ್ಳೋದಕ್ಕೆ ಇಷ್ಟಪಡೋದಿಲ್ಲ. ಆದರೆ ನೇಹಾ ಗೌಡ ಅಭಿಮಾನಿಗಳ ಆಶಿರ್ವಾದ ಮಗು ಮೇಲಿರಲಿ ಎಂದು ತಮ್ಮ ಜಗತ್ತನ್ನು ಪರಿಚಯಿಸಿದ್ದಾರೆ.
ನೇಹಾ ಹಾಗೂ ಚಂದನ್ ಮದುವೆ ಆಗಿ ಕೆಲವು ವರ್ಷಗಳು ಕಳೆದಿವೆ. ನೇಹಾ ಈಗ ತಾಯಿ ಆಗಿದ್ದಾರೆ. ಅಕ್ಟೋಬರ್ 29ರಂದು ಮಗಳು ಜನಿಸಿದ್ದಾಗಿ ಅವರು ಮಾಹಿತಿ ನೀಡಿದ್ದರು. ಈಗ ಅವರು ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ಮಗಳ ಹೆಸರಿನ ಬಗ್ಗೆ ನೇಹಾ ಯಾವುದೇ ಮಾಹಿತಿ ನೀಡಿಲ್ಲ.