ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನವರಿ 26 ಗಣರಾಜ್ಯೋತ್ಸವವನ್ನು ಆಚರಿಸಲು ದೇಶವೇ ಸಜ್ಜಾಗುತ್ತಿದ್ದು, ಈ ಸಮಯದಲ್ಲಿ ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದಾರೆ.
ಪಾಕಿಸ್ತಾನ ಮತ್ತು ಪಂಜಾಬ್ ದರೋಡೆಕೋರರಿಂದ ಬೆಂಬಲಿತವಾದ ಭಯೋತ್ಪಾದಕರ ಗುಂಪು ದೇಶದ ವಿವಿಧ ಭಾಗಗಳಲ್ಲಿ ಸಂಘಟಿತ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ತಿಳಿಸಿರುವ ಗುಪ್ತಚರ ಮೂಲಗಳು ಹೇಳಿದೆ.ಈ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಜ. 26 ಗಣರಾಜ್ಯೋತ್ಸವದಂದು ಅಥವಾ ಅದಕ್ಕೂ ಮೊದಲು ಸಂಘಟಿತ ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀದ್ದು,, ಈ ದಾಳಿಗೆ 26-26 ಎಂದು ಹೆಸರಿಸಲಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಬುಧವಾರ ದೆಹಲಿಯಲ್ಲಿ ಭದ್ರತಾ ಪಡೆಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರ, ಜಮ್ಮುವಿನ ರಘುನಾಥ ದೇವಸ್ಥಾನ ಹಾಗೂ ಇತರ ಪ್ರಮುಖ ದೇವಾಲಯಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಬಹುದು ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.
ಪಂಜಾಬ್ ಮೂಲದ ದರೋಡೆಕೋರರ ಸಹಾಯದಿಂದ ಪಾಕಿಸ್ತಾನದ ಮಿಲಿಟರಿ ಗುಪ್ತಚರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್, ಜೈಶ್-ಎ-ಮೊಹಮ್ಮದ್ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದೆ.
ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಾದ್ಯಂತ ವಿಶೇಷವಾಗಿ ಬಸ್ ಮತ್ತು ರೈಲು ನಿಲ್ದಾಣ ಪ್ರದೇಶಗಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೋಸ್ಟರ್ ಗಳನ್ನು ಅಳವಡಿಸಿವೆ. ಇದರಲ್ಲಿ ದೆಹಲಿಯ ಚೌಹಾಣ್ ಬಂಗೇರ್‌ನ ಮೊಹಮ್ಮದ್ ರೆಹಾನ್, ಮೊಹಮ್ಮದ್ ಉಮರ್, ಅಬು ಸುಫಿಯಾನ್, ಮೊಹಮ್ಮದ್ ಶಾಹಿದ್ ಫೈಸಲ್, ಸೈಯದ್ ಅರ್ಷಿಯಾ ಮತ್ತು ಶಾರ್ಜೀಲ್ ಅಖ್ತರ್ ಸೇರಿದ್ದಾರೆ.
ಈ ಬಾರಿ ಗಣರಾಜ್ಯೋತ್ಸವದ ಶಿಷ್ಟಾಚಾರದಲ್ಲೂ ಭದ್ರತಾ ಸಂಸ್ಥೆಗಳು ತೀವ್ರ ನಿಗಾ ಇರಿಸಲಿದೆ. ಅಲ್ಲದೇ ಕಾಶ್ಮೀರ ಮೂಲದ ರೆಸಿಸ್ಟೆನ್ಸ್ ಫ್ರಂಟ್‌ಗೆ ಸಂಬಂಧಿಸಿದ ಭಯೋತ್ಪಾದಕ ಘಟಕವಾದ ‘ಫಾಲ್ಕನ್ ಸ್ಕ್ವಾಡ್’ ಹಾಗೂ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಂದಲೂ ದಾಳಿಯಾಗುವ ಬಗ್ಗೆ ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬೆದರಿಕೆ ಮೇಲ್ವಿಚಾರಣೆಯನ್ನು ಕೂಡ ಹೆಚ್ಚಿಸಲಾಗಿದೆ.


