ಧನುಷ್​ ವಿರುದ್ಧ ಗುಡುಗಿದ ಲೇಡಿ ಸೂಪರ್​ ಸ್ಟಾರ್: ಆತ ನೀಚ, ಮಹಾನ್ ಅಹಂಕಾರಿ ಎಂದ ನಯನತಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಯನತಾರ ಮತ್ತು‌ ಧನುಷ್ ಇಬ್ಬರು‌ ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಇಬ್ಬರಿಗೂ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗ ಇದೆ. ಕೆಲ ಹಿಟ್ ಸಿನಿಮಾಗಳನ್ನು ಸಹ ನೀಡಿದ್ದಾರೆ. ಆದರೆ ಈ ಇಬ್ಬರೂ ಈಗ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದಾರೆ.

ಧನುಶ್ ಅನ್ನು ನಯನತಾರಾ ‘ನೀಚ’ ಎಂದು ನಿಂದಿಸಿದ್ದಾರೆ. ಮಾತ್ರವಲ್ಲದೆ ಧನುಶ್ ಅದೆಷ್ಟು ಕೆಟ್ಟ ವ್ಯಕ್ತಿ, ಅವರಿಗೆ ಅತಿಯಾದ ಅಹಂ ಇದೆ ಎಂದೆಲ್ಲ ಟೀಕೆ ಮಾಡಿದ್ದಾರೆ.

ನಯನತಾರಾ ಕುರಿತ ‘ನಯನತಾರಾ: ಬಿಯಾಂಡ್​ ದಿ ಫೇರೀಟೇಲ್’ ಡಾಕ್ಯುಮೆಂಟರಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೆ ಡಾಕ್ಯುಮೆಂಟರಿಯ ಪ್ರೋಮೋ ಬಿಡುಗಡೆ ಆಗಿದೆ.

ಪ್ರೋಮೋನಲ್ಲಿ ನಯನತಾರಾ ಬಗ್ಗೆ ಅವರ ಆತ್ಮೀಯರು ಮಾತನಾಡಿದ್ದಾರೆ. ಕೆಲವು ಸಿನಿಮಾಗಳ ದೃಶ್ಯಗಳು, ಚಿತ್ರೀಕರಣದ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಅದರಲ್ಲಿ ಮೂರು ಸೆಕೆಂಡ್​ನ ಶೂಟಿಂಗ್​ನ ವಿಡಿಯೋ ಒಂದನ್ನು ಬಳಸಲಾಗಿದ್ದು, ಆ ವಿಡಿಯೋ ಧನುಶ್ ನಿರ್ಮಾಣದ ‘ನಾನುಮ್ ರೌಡಿ ದಾ’ ಸಿನಿಮಾದ ದೃಶ್ಯವಾಗಿದೆ. ಆ ಸಿನಿಮಾದ ನಿರ್ಮಾಪಕ ನಟ ಧನುಶ್.

ಹೀಗಾಗಿ ಧನುಷ್ ತಾನು ನಿರ್ಮಾಣ ಮಾಡಿದ ಸಿನಿಮಾದ ಶೂಟಿಂಗ್ ದೃಶ್ಯವನ್ನು ಬಳಸಿದ್ದಕ್ಕಾಗಿ ನಯನತಾರಾಗೆ ಮತ್ತು ನೆಟ್​ಫ್ಲಿಕ್ಸ್​ಗೆ 10 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟು ನೊಟೀಸ್ ಕಳಿಸಿದ್ದಾರೆ.

ಧನುಶ್ ಕಳಿಸಿರುವ ನೊಟೀಸ್​ಗೆ ಅತ್ಯಂತ ಖಾರವಾಗಿ ಉತ್ತರಿಸಿರುವ ನಯನತಾರಾ, ಧನುಶ್​ ಅನ್ನು ನೀಚ ವ್ಯಕ್ತಿಯೆಂದು, ಮಹಾನ್ ಅಹಂಕಾರಿ ಎಂದು, ಹಣಬಾಕ ಎಂದೂ, ಕೃತಜ್ಞತೆ ಇಲ್ಲದವ ಎಂದೂ ಕರೆದಿದ್ದಾರೆ. ಕೆಲವು ಹಳೆಯ ವಿಷಯಗಳನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದಾರೆ.

‘ನಾನೂಮ್ ರೌಡಿ ದಾ’ ಸಿನಿಮಾದ ಹಾಡು, ವಿಡಿಯೋ ತುಣುಕು ಬಳಸಿಕೊಳ್ಳಲು ಕಳೆದ ಎರಡು ವರ್ಷದಿಂದಲೂ ಅನುಮತಿ ಕೇಳಿ ಕೊನೆಗೆ ನಿಮ್ಮಿಂದ ಪ್ರತಿಕ್ರಿಯೆ ಬರದೇ ಇದ್ದಾಗ ಅದನ್ನು ಕೈಬಿಟ್ಟು, ಅದೇ ಸಿನಿಮಾದ ಶೂಟಿಂಗ್ ದೃಶ್ಯವನ್ನು ಬಳಸಿಕೊಂಡಿದ್ದೇವೆ. ಆ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಮೂರು ಸೆಕೆಂಡ್ ಬಳಸಿಕೊಂಡಿದ್ದಕ್ಕೆ 10 ಕೋಟಿ ರೂಪಾಯಿ ನೊಟೀಸ್ ಕಳಿಸಿದ್ದೀರ. ಆ ಸಿನಿಮಾದ ಸಂಗೀತ, ಸಾಹಿತ್ಯವನ್ನು ಸಹ ಬಳಸಿಕೊಳ್ಳಲು ಅವಕಾಶ ನಿರಾಕರಿಸಿದ್ದೀರ, ಇದು ನನ್ನ ಹೃದಯ ಒಡೆಯುವಂತೆ ಮಾಡಿದೆ’ ಎಂದಿದ್ದಾರೆ ನಯನತಾರ.

ಆ ಸಿನಿಮಾ ಬಿಡುಗಡೆ ಆಗಿ 10 ವರ್ಷಗಳಾಗಿವೆ. ಆ ಸಿನಿಮಾ ನಿರ್ಮಾಣ ಮಾಡುವಾಗ ಅದೆಷ್ಟು ವಿಷವನ್ನು ನೀನು ನಮ್ಮಗಳ ಮೇಲೆ ಕಾರಿದ್ದೆ ಎಂಬುದು ನನಗೆ ಈಗಲೂ ನೆನಪಿದೆ. ಸಿನಿಮಾ ನಿರ್ಮಾಪಕನಾಗಿ ನಿನಗೆ ಅದು ಬಹಳ ದೊಡ್ಡ ಗೆಲುವಾಗಿದ್ದರೂ ಸಹ ಆ ಸಿನಿಮಾ ಮೇಲೆ, ಸಿನಿಮಾ ತಂಡದ ಮೇಲೆ ನೀನು ಆಡಬಾರದ ಮಾತುಗಳನ್ನು ಆಡಿದ್ದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಸಹ ನೀನು ಆಡಿದ ಮಾತುಗಳು ನನ್ನ ಮನಸ್ಸಿಗೆ ಮಾಡಿದ ಗಾಯ ಇನ್ನೂ ಆರಿಲ್ಲ’ ಎಂದಿದ್ದಾರೆ ನಯನತಾರಾ.

ಆಡಿಯೋ ಲಾಂಚ್ ಕಾರ್ಯಕ್ರಮಗಳಲ್ಲಿ ನಿನ್ನ ಅಮಾಯಕ ಅಭಿಮಾನಿಗಳ ಎದುರು, ನಾಟಕೀಯವಾಗಿ ಸುಳ್ಳುಗಳನ್ನು ಹೇಳುತ್ತಾ ನೀನೇನೋ ಸಾಧು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದೀಯ, ಆದರೆ ನಿಜಕ್ಕೂ ನೀನೆಂಥಹಾ ನೀಚ ಎಂಬುದು ಒಂದಲ್ಲ ಒಂದು ದಿನ ಗೊತ್ತಾಗುತ್ತದೆ. ಹೆಚ್ಚು ದಿನ ಮುಖಕ್ಕೆ ಮುಖವಾಡ ಹಾಕಿಕೊಂಡು ಇರಲು ಆಗಲ್ಲ’ ಎಂದು ಖಾರವಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!