ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನೇತೃತ್ವದ ಸರ್ಕಾರ ಆರೋಗ್ಯ ಮತ್ತು ಶಿಕ್ಷಣದಂತಹ ಅಗತ್ಯ ಕ್ಷೇತ್ರಗಳನ್ನು ನಿರ್ಲಕ್ಷಿಸಿದೆ. ಆರೋಗ್ಯ ಇಲಾಖೆಯಲ್ಲಿ ಹಣದ ಕೊರತೆ ಎದುರಾಗಿದ್ದು, ಔಷಧ ಖರೀದಿಸಲು ಹಾಗೂ ಆಸ್ಪತ್ರೆ ಮೂಲಸೌಕರ್ಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಖಂಡಿಸಿದ್ದಾರೆ.
ಸರ್ಕಾರವು ಸೇವಾ ಶುಲ್ಕವನ್ನು ಹೆಚ್ಚಿಸಿದೆ, ಇದರಿಂದ ರೋಗಿಗಳಿಗೆ ಹೊರೆಯಾಗಿದೆ. ಇದರಿಂದ ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬುದು ಸಾಬೀತಾಗುತ್ತಿದೆ. ಗ್ಯಾರಂಟಿ ನೀಡಿ ಸರ್ಕಾರ ಹೆಚ್ಚಿನ ತೆರಿಗೆ ಪಡೆಯುತ್ತಿದೆ ಎಂದು ಆರೋಪಿಸಿದರು.
ಕೈಗೆಟಕುವ ದರದ ಆರೋಗ್ಯ ಮತ್ತು ಕಲ್ಯಾಣದ ಭರವಸೆಗಳನ್ನು ಈಡೇರಿಸುವಲ್ಲಿ ಅವರ ಸರ್ಕಾರ ವಿಫಲವಾಗಿದೆ. ಆಹಾರ ಮತ್ತು ಆರೋಗ್ಯದ ವಿಷಯದಲ್ಲಿ ಅವರು ಜನರನ್ನು ವಂಚಿಸುತ್ತಿದ್ದಾರೆ. ಒಂದೆಡೆ ಭೂಮಿ, ಮತ್ತೊಂದೆಡೆ ಪಡಿತರ ಚೀಟಿ ಕಿಸಿಯುತ್ತಿದ್ದಾರೆ. ಇದೀಗ ಆರೋಗ್ಯ ಸೇವೆಯೂ ಸಿಗುತ್ತಿಲ್ಲ. ಬಡ ಸರ್ಕಾರ ಎಂದರೆ ಇದೇನಾ? ಎಂದು ಪ್ರಶ್ನಿಸಿದರು.
ವಿಧಾನಸೌಧಕ್ಕೆ ಪ್ರವೇಶ ಪಡೆಯಲು ಲಂಚ ಅಗತ್ಯವಾಗಿದೆ ಹೋಗಿದೆ, ಮುಡಾ ಹಗರಣದ ನಂತರ ಸರ್ಕಾರದ ಗಮನ ಜನಪರವಾಗಿಲ್ಲ. ಆರೋಗ್ಯ ಸೇವೆಯು ಉಚಿತವಾಗಿರಬೇಕು. ಆದರೆ, ಸರ್ಕಾರ ಬಡವರ ಮೇಲೆ ಹೊರೆ ಹೊರಿಸುವ ಧೋರಣೆಯನ್ನು ಅಳವಡಿಸಿಕೊಂಡಿದೆ ಎಂದು ಕಿಡಿಕಾರಿದರು.