ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಅನುಶಕ್ತಿ ನಗರದಲ್ಲಿ ಮತ ಎಣಿಕೆಯಲ್ಲಿ ಮುಂಚೂಣಿಯಲ್ಲಿದ್ದ ಪತಿ ಫಹಾದ್ ಅಹ್ಮದ್ ಅವರಿಗೆ ಹಿನ್ನಡೆಯಾಗುತ್ತಿದ್ದಂತೆ ನಟಿ ಸ್ವರಾ ಭಾಸ್ಕರ್ ಅವರು ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ರದ್ ಪವಾರ್ ನೇತೃತ್ವದ ಎನ್ಸಿಪಿ ಬಣದ ಅಭ್ಯರ್ಥಿಯಾಗಿರುವ ಅಹ್ಮದ್ ಅವರು ಪ್ರಸ್ತುತ ಅಜಿತ್ ಪವಾರ್ ಅವರ ಎನ್ಸಿಪಿಯ ನಾಮನಿರ್ದೇಶಿತ ಸನಾ ಮಲಿಕ್ ವಿರುದ್ಧ ಸ್ಪರ್ಧಿಸಿದ್ದಾರೆ.
ಶೇ. 99ರಷ್ಟು ಚಾರ್ಜ್ ಹೊಂದಿರುವ ಇವಿಎಂಗಳನ್ನು ತೆರೆಯುವವರೆಗೆ ಮುಂಬೈನ ಅನುಶಕ್ತಿ ನಗರ ಕ್ಷೇತ್ರದಲ್ಲಿ ಫಹಾದ್ ಅಹ್ಮದ್ ಮುನ್ನಡೆ ಸಾಧಿಸಿದ್ದರು ಎಂದು ಸ್ವರಾ ಭಾಸ್ಕರ್ ಹೇಳಿದ್ದಾರೆ.
ಅನುಶಕ್ತಿ ನಗರ ವಿಧಾನ ಸಭೆಯಲ್ಲಿ ಎನ್ಸಿಪಿ-ಎಸ್ಪಿಯ ಫಹಾದ್ ಜಿರಾರ್ ಅಹ್ಮದ್ ಅವರ ಸ್ಥಿರ ಮುನ್ನಡೆಯ ನಂತರ 17, 18, 19ರ ಸುತ್ತಿನಲ್ಲಿ ಇದ್ದಕ್ಕಿದ್ದಂತೆ 99% ಬ್ಯಾಟರಿ ಚಾರ್ಜರ್ ಇವಿಎಂಗಳನ್ನು ತೆರೆಯಲಾಗಿದೆ. ಈ ವೇಳೆ ಬಿಜೆಪಿ ಬೆಂಬಲಿತ ಎನ್ಸಿಪಿ-ಅಜಿತ್ ಪವಾರ್ ಮೈತ್ರಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಡೀ ದಿನ ಮತ ಚಲಾಯಿಸಿದ ಯಂತ್ರಗಳು 99% ಚಾರ್ಜ್ ಮಾಡಿದ ಬ್ಯಾಟರಿಗಳನ್ನು ಹೇಗೆ ಹೊಂದುತ್ತವೆ? ಸಂಪೂರ್ಣವಾಗಿ 99% ಚಾರ್ಜ್ ಮಾಡಿದ ಬ್ಯಾಟರಿಗಳು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಏಕೆ ಮತಗಳನ್ನು ನೀಡುತ್ತವೆ? ಎಂದು ಸ್ವರಾ ಭಾಸ್ಕರ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಶ್ನಿಸಿದ್ದಾರೆ.
ಅಹ್ಮದ್ ಅವರು 17ನೇ ಸುತ್ತಿನವರೆಗೆ ಮುನ್ನಡೆ ಸಾಧಿಸಿದ್ದರು. ಈ ವಿಷಯದ ಬಗ್ಗೆ ಚುನಾವಣಾ ಆಯೋಗದ ಬಳಿ ಹೋಗುವುದಾಗಿ ಹೇಳಿದ್ದಾರೆ. ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಪುತ್ರಿ ಸನಾ ಮಲಿಕ್ ವಿರುದ್ಧ ಫಹಾದ್ ಅಹಮದ್ ಕಣಕ್ಕಿಳಿದಿದ್ದಾರೆ.