ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ವ್ಯವಹಾರದಲ್ಲಿ ಗೊಂದಲ ಸಂಭವ. ಕೌಶಲದಿಂದ ಅದನ್ನು ನಿಭಾಯಿಸಿ. ಆತುರ, ದುಡುಕು ಬೇಡ. ಕೌಟುಂಬಿಕ ನೆಮ್ಮದಿ.

ವೃಷಭ
ಮನೆಯವರ  ಭಾವನೆಗೆ ಬೆಲೆಕೊಡಿ. ಅವರ ಬೇಡಿಕೆ ಕಡಗಣಿಸದಿರಿ. ವೃತ್ತಿಯ ಒತ್ತಡ ಖಾಸಗಿ ಬದುಕಿನ ಮೇಲೆ ಪರಿಣಾಮ.

ಮಿಥುನ
ಖಾಸಗಿ ವಿಷಯ ಮನಸ್ಸಿನ ಶಾಂತಿ ಕದಡುತ್ತದೆ. ಕೆಲವರು  ನಿಮ್ಮ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ಸಂಯಮವಿರಲಿ.

ಕಟಕ
ಭಾವನಾತ್ಮಕ ತಲ್ಲಣ ಅನುಭವಿಸುವಿರಿ. ಆತ್ಮೀಯರೊಂದಿಗಿನ ವ್ಯವಹಾರ ಅದಕ್ಕೆ ಕಾರಣ. ನಿಮ್ಮನ್ನು ಕಡೆಗಣಿಸಿದ ಭಾವನೆ ಕಾಡಬಹುದು.

ಸಿಂಹ
ನಿಮ್ಮ ಗುರಿಯನ್ನು ಸುಲಭದಲ್ಲಿ ಸಾಧಿಸುವಿರಿ. ಸಾಂಸಾರಿಕ ಬಿಕ್ಕಟ್ಟಿಗೆ ಸೌಹಾರ್ದ ಪರಿಹಾರ. ಭಿನ್ನಮತ ನಿವಾರಣೆಗೆ ಮಾತುಕತೆಯೇ ದಾರಿ.

ಕನ್ಯಾ
ಯೋಜಿಸಿ ಕಾರ್ಯ ಎಸಗಿ. ಅನವಶ್ಯ ಗೊಂದಲ ನಿವಾರಿಸಿಕೊಳ್ಳಿ.  ಖಾಸಗಿ ಬದುಕು ಮತ್ತು ವೃತ್ತಿಯ ಮಧ್ಯೆ ಸಮತೋಲನ ಸಾಧಿಸಿರಿ.

ತುಲಾ
ಇತರರ ಏಳಿಗೆಯ ಕುರಿತು ಹೆಚ್ಚು ಚಿಂತಿಸುವಿರಿ. ನಿಮ್ಮ ಸ್ವಂತ ವ್ಯವಹಾರ ಕಡೆಗಣಿಸಬೇಡಿ.  ಕೌಟುಂಬಿಕ ಸಹಕಾರ.

ವೃಶ್ಚಿಕ
ನಿಮ್ಮ ಖರ್ಚು ಇಂದು ಹೆಚ್ಚಬಹುದು. ಅದು ಅನಿವಾರ್ಯ. ತಪ್ಪಿಸಲಾಗದು. ಮನೆಯಲ್ಲಿ ಬಿಕ್ಕಟ್ಟು ಪರಿಹಾರ, ಸಹಕಾರ.

ಧನು
ಖಾಸಗಿ ಬದುಕು ಮತ್ತು ವೃತ್ತಿಯಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಭಾವುಕರಾಗದೆ ವರ್ತಿಸಿದರೆ ಸಮಸ್ಯೆಗೆ ಪರಿಹಾರ ಸಾಧ್ಯ.

ಮಕರ
ಆಪ್ತರ ಸಂಗದಲ್ಲಿ ಹೆಚ್ಚು ಖುಷಿ ಕಾಣುವಿರಿ. ವೃತ್ತಿಯ ಒತ್ತಡ ನಿಮ್ಮನ್ನು ಇಂದು ಬಾಧಿಸಲಾರದು. ಹಣದ ವಿಚಾರದಲ್ಲಿ ಪೂರಕ ಬೆಳವಣಿಗೆ.

ಕುಂಭ
ಮನಸ್ಸಿನ ಒತ್ತಡ ನಿಭಾಯಿಸಿ. ಇಲ್ಲವಾದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರೀತು. ಆರ್ಥಿಕ ಸಮಸ್ಯೆ ತುಸು ನಿವಾರಣೆ.

ಮೀನ
ಸಮಸ್ಯೆಗಳ ಬಗ್ಗೆ ಇತರರ ಜತೆ ಚರ್ಚಿಸಿ. ಅದರಿಂದ ಮನಸ್ಸಿಗೆ ಸಮಾಧಾನ. ನಿಮ್ಮಲ್ಲೇ ಕೊರಗುತ್ತಾ ಕೂರಬೇಡಿ. ಖರ್ಚು ಅಧಿಕ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!