ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಬರೋಬ್ಬರಿ 18 ಕೋಟಿ ನೀಡಿ ಅರ್ಷದೀಪ್ ಸಿಂಗ್ ಅವರನ್ನು ಖರೀದಿ ಮಾಡಲಾಗಿದೆ.
ಹರ್ಷದೀಪ್ ಸಿಂಗ್ ಬೇಸ್ ಪ್ರೈಸ್ 2 ಕೋಟಿ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಅರ್ಷದೀಪ್ ಸಿಂಗ್ ಬಿಡ್ ಮಾಡಿತು. ಇವರಿಗಾಗಿ ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಆರ್ಸಿಬಿ, ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಪೈಪೋಟಿಗಿಳಿದವು. ಕೊನೆಗೂ ಅರ್ಷದೀಪ್ ಸಿಂಗ್ ಪಂಜಾಬ್ ಪಾಲಾದರು.
ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ಸ್ ತಂಡ ಅರ್ಷದೀಪ್ ಸಿಂಗ್ ಅವರನ್ನು ರಿಲೀಸ್ ಮಾಡಿತ್ತು. ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬರೋಬ್ಬರಿ 65 ಪಂದ್ಯ ಆಡಿದ್ದು, ಸುಮಾರು 76 ವಿಕೆಟ್ ಪಡೆದಿದ್ದಾರೆ. ಇವರು ವಿಕೆಟ್ ಟೇಕರ್ ಮತ್ತು ಡೆತ್ ಬೌಲರ್. ಈಗ ಮತ್ತೆ ಆರ್ಟಿಎಂ ಮೂಲಕ ಖರೀದಿ ಮಾಡಿದ್ದಾರೆ.