ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಸಜ್ದೇಶ್ ತಮ್ಮ ಮಗನಿಗೆ ‘ಅಹಾನ್ ಶರ್ಮಾ’ ಎಂದು ಹೆಸರಿಟ್ಟಿದ್ದಾರೆ. ಇದನ್ನು ರೋಹಿತ್ ಪತ್ನಿ ರಿತಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ರೋಹಿತ್ -ರಿತಿಕಾ ಜೋಡಿ ಕಳೆದ ತಿಂಗಳು ಕೊನೆ ವಾರದಲ್ಲಿ ತಮ್ಮ 2ನೇ ಮಗುವನ್ನ ಸ್ವಾಗತಿಸಿದ್ದರು. ಇದಕ್ಕಾಗಿ ರೋಹಿತ್ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ 2ನೇ ಟೆಸ್ಟ್ಗೂ ಮುನ್ನ ತಂಡವನ್ನ ಸೇರಿಕೊಂಡಿದ್ದಾರೆ.
ಡಿಸೆಂಬರ್ ತಿಂಗಳಾಗಿರುವುದರಿಂದ ಕ್ರಿಸ್ಮಸ್ ಸಾಂಟಾ ಗೆಟಪ್ನಲ್ಲಿರುವ ಫ್ಯಾಮಿಲಿ ಗೊಂಬೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ರಿತಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ, ರೋ (ರೋಹಿತ್ ಶರ್ಮಾ), ರಿಟ್ಸ್ (ರಿತಿಕಾ ಸಜ್ದೇಶ್),ಸಮ್ಮಿ (ಸಮೈರಾ) ಮತ್ತು ಅಹಾನ್ ಎಂದು ನಾಲ್ಕು ಗೊಂಬೆಗಳ ಫೋಟೋವನ್ನ ಹಂಚಿಕೊಂಡಿದ್ದಾರೆ. ನವೆಂಬರ್ 15 ರಂದು ರಿತಿಕಾ ಅಹಾನ್ಗೆ ಜನ್ಮ ನೀಡಿದ್ದರು.
ಸಂಸ್ಕೃತ ಮೂಲದ ಅಹಾನ್ ಎಂಬ ಹೆಸರಿನ ಅರ್ಥ “ಬೆಳಗ್ಗೆ” ಅಥವಾ “ಪ್ರಾರಂಭ” ಎಂದರ್ಥ ಬರುತ್ತದೆ. ಇದು ದಂಪತಿಗಳ ಜೀವನದಲ್ಲಿ ಹೊಸ ಅಧ್ಯಾಯವನ್ನು ಸಂಕೇತಿಸುತ್ತದೆ.
ರೋಹಿತ್ ಹಾಗೂ ರಿತಿಕಾ 2015ರ ಡಿಸೆಂಬರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ 2018ರಲ್ಲಿ ಸಮೈರಾ ಎಂಬ ಮಗಳು ಜನಿಸಿದ್ದಳು. ಇದೀಗ 6 ವರ್ಷಗಳ ನಂತರ ಈ ಜೋಡಿ ಮಗ ಜನಿಸಿದ್ದು, ಅಹಾನ್ ಎಂದು ನಾಮಕರಣ ಮಾಡಿದ್ದಾರೆ.