ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳಲಾಗಿದೆ. ಬೆಂಗಳೂರಿನ ಬ್ರಿಗೇಡ್ ರೋಡ್, ಎಂಜಿ ರೋಡ್ಗಳಲ್ಲಿನ ಪಬ್ಗಳಲ್ಲಿ ಪಾರ್ಟಿ ಜೋರಾಗಿರುತ್ತದೆ.
ಈ ವಿಷಯವಾಗಿ ಲಾಡ್ಜ್, ರೆಸ್ಟೋರೆಂಟ್ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟದ ಬಗ್ಗೆ ಕಣ್ಣು ಇಡಲಾಗಿದೆ. ಡ್ರಗ್ ಕೇಸ್ನಲ್ಲಿ 380 ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾಹಿತಿ ನೀಡಿದ್ದಾರೆ.
ಆರೋಪಿಗಳ ಮನೆಯಲ್ಲಿ ತಪಾಸಣೆ ಮಾಡಲಾಗಿದೆ. 1630 ಬಾರ್ ಆ್ಯಂಡ್ ರೆಸ್ಟೊರೆಂಟ್ಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ರೌಡಿಗಳನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಎಂಒಬಿ (ಅಪರಾಧ ಹಿನ್ನಲೆಯುಳ್ಳವರು) ಅನ್ನೂ ವಿಚಾರಣೆ ಮಾಡಲಾಗಿದೆ ಎಂದು ತಿಳಸಿದ್ದಾರೆ. ವಿಸಾ ಅವಧಿ ಮುಗಿದರೂ ಕೆಲವು ವಿದೇಶಿಗರು ಇಲ್ಲೇ ವಾಸವಿಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 29 ಮಂದಿ ವಿದೇಶಿಗರನ್ನು ಎಫ್ಆರ್ಆರ್ಒ (ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ) ಮುಂದೆ ಹಾಜರು ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.