ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಫೆಂಗಲ್ ಚಂಡಮಾರುತ ಕರ್ನಾಟಕದಲ್ಲಿ ಅವಾಂತರ ಸೃಷ್ಟಿಮಾಡಿದೆ. ಇದರ ಎಫೆಕ್ಟ್ ಹಾಲಿನ ಮೇಲೂ ಬೀರಿದೆ.
ಕಳೆದ 2 ರಿಂದ 3 ದಿನಗಳಿಂದ ಕರ್ನಾಟಕ ಹಾಲು ಒಕ್ಕೂಟ ನಂದಿನಿ ಹಾಲು ಉತ್ಪಾದನೆ 10 ಲಕ್ಷ ಲೀಟರ್ ನಷ್ಟು ಕಡಿಮೆಯಾಗಿದೆ ಎಂದು ಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಗೌಡ ತಿಳಿಸಿದ್ದಾರೆ ಎನ್ನಲಾಗಿದೆ.
ಮಳೆ ಹಾಗೂ ಚಳಿಯಿಂದ ಹಸುಗಳು ಸರಿಯಾಗಿ ಹುಲ್ಲು ತಿನ್ನುತ್ತಿಲ್ಲ. ಇದರಿಂದ ರಾಜ್ಯದ 16 ಒಕ್ಕೂಟಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇನ್ನು, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಪ್ರತಿದಿನ 50 ಸಾವಿರ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಗಿದೆ. ಹಸುಗಳು ಸರಿಯಾಗಿ ಹುಲ್ಲು ತಿನ್ನದೆ ಇರುವುದೇ ಹಾಲು ಉತ್ಪಾದನೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಬಿಸಿಲು ಬಂದರೆ ಮತ್ತೆ ಹಾಲಿನ ಉತ್ಪಾದನೆ ಹೆಚ್ಚಳವಾಗಲಿದೆ ಎಂದು ಹೇಳಿದರು.