ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರೇ ಹೇಳಿದರೂ ವಿಜಯೇಂದ್ರರನ್ನು ಕೆಳಗಿಳಿಸಲು ಆಗಲ್ಲ, ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಮಾಜಿ ಸಚಿವ ಶ್ರೀರಾಮುಲು, ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಈಗ ಎರಡು ಬಣಗಳಿರಬಹುದು. ಆದರೆ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಹೈಕಮಾಂಡ್ ಸರಿಪಡಿಸುತ್ತದೆ. ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಏಕೆಂದರೆ ಅವರು ವೈಯಕ್ತಿಕ ಹೋರಾಟ ಮಾಡುತ್ತಿಲ್ಲ. ಹಾಗಾಗಿ ಯತ್ನಾಳ್ ಉಚ್ಚಾಟನೆ ಪ್ರಶ್ನೆ ಇಲ್ಲ ಎಂದು ಹೇಳಿದರು.
ದೆಹಲಿಗೆ ತೆರಳಿದ ಆರ್.ಅಶೋಕ್ ವಿಚಾರವಾಗಿ ಮಾತನಾಡಿ, ಅಶೋಕ್ ಸೇರಿದಂತೆ ಎಲ್ಲರನ್ನೂ ಕರೆಸಿ ಭಿನ್ನಮತೀಯರ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆಯುತ್ತದೆ. ನಾವು ಎರಡು ಬಣಗಳಾದರೂ ನಮ್ಮ ಹೋರಾಟ ಒಂದೇ. ಯತ್ನಾಳ್ ಅವರು ಶಿಸ್ತು ಸಮಿತಿಗೆ ಎಲ್ಲವನ್ನೂ ವಿವರಿಸಲಿದ್ದಾರೆ. ಎಲ್ಲ ಬಣಗಳು ಒಂದಾಗಲಿವೆ ಎಂದರು.