ಮಳೆಗಾಲ ಆರಂಭವಾಗಿದ್ದು, ಮಕ್ಕಳ ಆರೋಗ್ಯ ಕಾಪಾಡುವುದೇ ಪೋಷಕರಿಗೆ ದೊಡ್ಡ ಚಿಂತೆಯಾಗಿದೆ. ಮಕ್ಕಳು ಆಗಾಗ ಹುಷಾರಿಲ್ಲದಂತೆ ಆಗುವುದು, ಅವರ ಆರೈಕೆ, ಆಸ್ಪತ್ರೆಯಲ್ಲಿ ಕಾದು ತೋರಿಸುವುದು ಇವೆಲ್ಲದರ ಬದಲಾಗಿ ಮಕ್ಕಳ ಆರೋಗ್ಯ ಚೆನ್ನಾಗಿ ಕಾಪಾಡಿ.. ಹೇಗೆ ನೋಡಿ..
ಹೈಜೀನ್ ಕಾಪಾಡಿ, ಆಗಾಗ ಮಕ್ಕಳ ಕೈತೊಳೆಸಿ.
ಮಳೆಗಾಲಕ್ಕೆ ಯಾವ ರೀತಿ ಬಟ್ಟೆ ಹಾಕಬೇಕೋ ಆ ರೀತಿಯ ಕೈ ತುಂಬಾ, ಮೈತುಂಬಾ ಬಟ್ಟೆ ಹಾಕಿ.
ಬ್ಯಾಲೆನ್ಸ್ ಆದ ಡಯಟ್ ಹಾಗೂ ಹೆಚ್ಚೆಚ್ಚು ನೀರು ಕುಡಿಯಿರಿ.
ಆದಷ್ಟು ಮನೆಯೊಳಗೆ ಆಟ ಆಡೋದಕ್ಕೆ ಪ್ರೋತ್ಸಾಹ ನೀಡಿ.
ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಸಿ.
ಹುಳ, ಸೊಳ್ಳೆ ಇನ್ನಿತರ ಸಮಸ್ಯೆಗಳು ಬಾರದಂತೆ ತಡೆಗಟ್ಟಿ
ಆಗಾಗ ಹೆಲ್ತ್ ಚೆಕಪ್ ಮಾಡಿಸಿ, ರಸ್ತೆ ಬದಿಯ ಆಹಾರಕ್ಕೆ ನೋ ಹೇಳಿ.
ಮನೆಯಲ್ಲಿ ಶುಷ್ಕ ವಾತಾವರಣವಿರದಂತೆ ಕಾಪಾಡಿ
ಚಿಪ್ಸ್, ಬಿಸ್ಕೆಟ್, ಚಾಕೋಲೆಟ್, ನೂಡಲ್ಸ್ ಇನ್ನಿತರ ಜಂಕ್ ಫುಡ್ ತಿನ್ನದಂತೆ ನೋಡಿಕೊಳ್ಳಿ
ಇಮ್ಯುನಿಟಿ ಹೆಚ್ಚಿಸುವ ಆಹಾರ ಕಷಾಯ ಕುಡಿಯಿರಿ