ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್ ಹಾಗೂ ಐಶ್ವರ್ಯ ಫೋಟೋ ಒಂದು ವೇಗವಾಗಿ ವೈರಲ್ ಆಗ್ತಿದೆ. ಈ ಫೋಟೋದಲ್ಲಿ ಐಶ್ವರ್ಯ ರೈ ಅಮ್ಮ ವೃಂದಾ ರೈ ಹಾಗೂ ನಿರ್ಮಾಪಕಿ ಅನು ರಂಜನ್ ಕಾಣಿಸಿಕೊಂಡಿದ್ದಾರೆ. ಗುರುವಾರ ನಡೆದ ಪಾರ್ಟಿಯೊಂದರ ಫೋಟೋ ಇದಾಗಿದೆ. ಈ ಪಾರ್ಟಿಯಲ್ಲಿ ಆಯೇಶಾ ಜುಲ್ಕಾ, ಸಚಿನ್ ತೆಂಡೂಲ್ಕರ್, ತುಷಾರ್ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.
ಅಭಿಷೇಕ್ ಮತ್ತು ಐಶ್ವರ್ಯ ದೂರವಾಗಿದ್ದಾರೆ ಎಂಬ ಸುದ್ದಿ, ಅನಂತ್ ಅಂಬಾನಿ ಮದುವೆ ಸಮಯದಲ್ಲಿ ಜೋರು ಪಡೆದಿತ್ತು. ಮದುವೆಗೆ ಐಶ್ವರ್ಯ ಹಾಗೂ ಅಭಿಷೇಕ್ ಬೇರೆಯಾಗಿ ಬಂದಿದ್ದರು. ಅದಾದ್ಮೇಲೆ, ಐಶ್ವರ್ಯ ಜೊತೆ ಯಾವುದೇ ವಿದೇಶಿ ಪ್ರವಾಸದಲ್ಲಿ ಅಭಿಷೇಕ್ ಕಾಣಿಸಿಕೊಂಡಿರಲಿಲ್ಲ. ಆರಾಧ್ಯ ಬರ್ತ್ ಡೇಯಲ್ಲೂ ಅಭಿಷೇಕ್ ಗೈರಾಗಿದ್ದಾರೆ ಎಂದು ಭಾವಿಸಲಾಗಿತ್ತು. ಆದ್ರೆ ಅಭಿಷೇಕ್ ಹಾಗೂ ಐಶ್ವರ್ಯ, ಆರಾಧ್ಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು, ಅದ್ರ ವಿಡಿಯೋಗಳು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು.
ಇಬ್ಬರು ಡಿವೋರ್ಸ್ ಪಡೆದಿದ್ದಾರೆ ಎನ್ನುವ ಸುದ್ದಿಗೆ ಈ ಫೋಟೊ ಸದ್ಯ ಬ್ರೇಕ್ ಹಾಕಿದೆ.