U19 Asia Cup: ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

19 ವರ್ಷದೊಳಗಿನ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ಅಂಡರ್ 19 ತಂಡವನ್ನು ಸೋಲಿಸಿ ಭಾರತ ಅಂತಿಮ ಸುತ್ತಿಗೆ ಪ್ರವೇಶಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾವನ್ನುಭಾರತೀಯ ಬೌಲರ್​​ಗಳು 173 ರನ್​ಗಳಿಗೆ ನಿಯಂತ್ರಿಸಿದರು. ಭಾರತ ತಂಡ ಗೆಲ್ಲಲು 174 ರನ್​ಗಳ ಅವಶ್ಯಕತೆ ಇತ್ತುಅವಶ್ಯಕತೆಯಿತ್ತು. ಭಾರತ ಈ ಮೊತ್ತವನ್ನ ಕೇವಲ 21.4 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಭಾರತ ತಂಡದ 8ನೇ ಫೈನಲ್ ಇದಾಗಿದೆ. ಯಂಗ್ ಇಂಡಿಯಾ ಇದುವರೆಗೆ ನಡೆದಿರುವ 9 ಜೂನಿಯರ್ ಏಷ್ಯಾಕಪ್​ನಲ್ಲಿ 7 ವಿಕೆಟ್​ಗಳ ಜಯ ಸಾಧಿಸಿದೆ. ಉಳಿದ ಎರಡರಲ್ಲಿ ಒಂದೊಂದು ಬಾರಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡ ಚಾಂಪಿಯನ್​ ಆಗಿವೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಇದುವರೆಗೂ ಒಮ್ಮೆಯೂ ಚಾಂಪಿಯನ್ ಆಗಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!