ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಪಾಲರ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಆರ್ ಡಿಎಕ್ಸ್, ಐಇಡಿ ಬಾಂಬ್ ಇಟ್ಟಿದ್ದು ಮಧ್ಯಾಹ್ನವೇ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಬರೆದಿದ್ದ ಇಮೇಲ್ ಒಂದು ರಾಜ್ಯಪಾಲರ ಕಚೇರಿಗೆ ಬಂದಿದೆ .
ಇದೇ ತಿಂಗಳ 14 ರಂದು ಈ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಆರ್ ಡಿಎಕ್ಸ್, ಐಇಡಿ ಬಾಂಬ್ ಇಟ್ಟಿದ್ದು ಮಧ್ಯಾಹ್ನ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಇಮೇಲ್ನಲ್ಲಿ ಬರೆಯಲಾಗಿದೆ. ಐಇಡಿ ಬಾಂಬ್ ಇಟ್ಟು, ಇಬ್ಬರು ಟ್ರಿಗರ್ ಇಟ್ಟುಕೊಂಡಿದ್ದಾರೆ ಎಂದು ಬರೆದಿದ್ದು ಇಮೇಲ್ ನಿಂದ ಈ ಸಂದೇಶ ಕಳುಹಿಸಲಾಗಿದೆ.
ಬಳಿಕ ಕಚೇರಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ಮಾಡಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


