October 18, 2026
Sunday, October 18, 2026
spot_img

ಶ್ರೀಶೈಲ ಮಲ್ಲಿಕಾರ್ಜುನ ದರುಶನ ಮುಗಿಸಿಕೊಂಡು ಬರುವಾಗ ಭೀಕರ ಅಪಘಾತ, ಇಬ್ಬರು ಸಾ*ವು

ಹೊಸದಿಗಂತ ವರದಿ ಚಿಕ್ಕೋಡಿ :

ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದರ್ಶನ ಮಾಡಿ ಗ್ರಾಮಕ್ಕೆ ಮರಳುತ್ತಿದ್ದ ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಮೂವರು, ಸೋಮವಾರ ಸಂಜೆ ನಡೆದ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಯಕ್ಸಂಬಾ ಪಟ್ಟಣದ ನಿವಾಸಿಗಳಾದ ಅಜೀತ ಸಾತ್ವಾರ (28), ಗೌರವ ಶಹಾ (42), ಅಲಕಾ ಸಿಂಧೆ, (60)ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಮಾರಕಾಪೂರ ಜಿಲ್ಲೆಯ ಕಂಬಾಮಾ ಗ್ರಾಮದ ಬಳಿಯಲ್ಲಿ ಅಪಘಾತ ಸಂಭವಿಸಿದೆ. ಕ್ರೂಸರ್ ಹಾಗೂ ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು, ಕ್ರೂಸರ್ ನಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. 14 ಜನ ಕ್ರೂಸರ್ ನಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರೂ ಯಕ್ಸಂಬಾ ಪಟ್ಟಣದ ನಿವಾಸಿಗಳಾಗಿದ್ದಾರೆ.

Must Read