ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಬ್ಲಾಕ್ಬಸ್ಟರ್ ಅನಿಮಲ್ ಸಿನಿಮಾಗೆ ಸೀಕ್ವೆಲ್ ಬರ್ತಿದೆ, ಪಾರ್ಟ್-2 ಜೊತೆಗೆ ಪಾರ್ಟ್- 3 ಕೂಡ ಬರ್ತಿದೆ ಎಂದು ಹೇಳಲಾಗಿದೆ.
ಹೌದು ಈ ಗುಡ್ನ್ಯೂಸ್ನ್ನು ನಟ ರಣಬೀರ್ ಕಪೂರ್ ನೀಡಿದ್ದಾರೆ. ಅನಿಮಲ್ ಸಿನಿಮಾ ರಿಲೀಸ್ ಆದಾಗ ಹೆಚ್ಚಿನ ಜನ ಅದನ್ನು ಇಷ್ಟಪಟ್ಟಿಲ್ಲ. ಆದರೆ ಎಲ್ಲರೂ ಸಿನಿಮಾ ನೋಡಿದ್ದಾರೆ ಎನ್ನುವುದು ಟೀಂನ ವಾದವಾಗಿದೆ.
ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದು ಆರಂಭ ಆಗೋದು ಯಾವಾಗ ಎನ್ನುವ ಮಾಹಿತಿಯೂ ಸಿಕ್ಕಿದೆ. ‘ಅನಿಮಲ್ 2’ ಶೂಟಿಂಗ್ 2027ರಿಂದ ಆರಂಭ ಆಗಲಿದೆಯಂತೆ. ‘ಅನಿಮಲ್ 3’ ಆರಂಭದ ಬಗ್ಗೆ ಯಾವುದೇ ಸಮಯ ನೀಡಿಲ್ಲ.
‘ನಾವು ಅನಿಮಲ್ 2 ಚಿತ್ರವನ್ನು 2027ರಲ್ಲಿ ಆರಂಭಿಸಬೇಕು. ನನಗೆ ಈ ಚಿತ್ರವನ್ನು ಮೂರು ಪಾರ್ಟ್ಗಳಲ್ಲಿ ಮಾಡಬೇಕು ಎಂಬ ಆಸೆ ಇದೆ. ಎರಡನೇ ಪಾರ್ಟ್ಗೆ ಅನಿಮಲ್ ಪಾರ್ಕ್ ಎನ್ನುವ ಹೆಸರು ಇಡಲಾಗಿದೆ. ನಾವು ಈ ಬಗ್ಗೆ ಮೊದಲ ಭಾಗದ ಶೂಟ್ ನಡೆಯುವಾಗಲೇ ಚರ್ಚೆ ಮಾಡುತ್ತಿದ್ದೆವು. ಈ ಕಥೆಯನ್ನು ಮುಂದುವರಿಸಲು ಬಯಸುತ್ತೇವೆ’ ಎಂದಿದ್ದಾರೆ ರಣಬೀರ್ ಕಪೂರ್.
‘ಈ ಸಿನಿಮಾ ನನಗೆ ಖುಷಿ ಕೊಟ್ಟಿದೆ. ವಿಲನ್ ಹಾಗೂ ಹೀರೋ ಪಾತ್ರವನ್ನು ಒಟ್ಟಿಗೆ ಮಾಡುವ ಅವಕಾಶ ಸಿಕ್ಕಿದೆ. ಈ ಸಿನಿಮಾದ ಭಾಗ ಆಗಲು ಖುಷಿ ಇದೆ’ ಎಂದು ರಣಬೀರ್ ಕಪೂರ್ ಅವರು ಹೇಳಿದ್ದಾರೆ.