ಹೊಸ ದಿಗಂತ ವರದಿ,ಕಲಬುರಗಿ:
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್,ನಲ್ಲಿನ ರೀಲ್ ನೋಡಿ,ಇದರಲ್ಲಿ ನಾನು ಮಿಂಚಬೇಕೆಂದು ಭಾವಿಸಿ, ರೀಲ್ ಮಾಡಲು ಹೋಗಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಗ್ರಾಮದ ನಿವಾಸಿ ಲೋಕೇಶ್ ಕಲ್ಲಪ್ಪ ಪೂಜಾರಿ (೩೪) ಎಂಬಾತನೇ ರೀಲ್ ಮಾಡಲು ಹೋಗಿ ಸಾವನ್ನಪ್ಪಿದ ಯುವಕನಾಗಿದ್ದು,ಕಬ್ಬಿನ ಗದ್ದೆಯಲ್ಲಿ ಕಬ್ಬು ನಾಟಿ ಮಾಡುವುದಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದನು.ಒಂದು ಕೈಯಲ್ಲಿ ಟ್ರ್ಯಾಕ್ಟರ್ ಸ್ಟೇರಿಂಗ್ ಹಾಗೂ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ರೀಲ್ ಮಾಡುವಾಗ, ಅಚಾನಕ್ ಆಗಿ ಮೊಬೈಲ್ ಕೈಯಿಂದ ಜಾರಿ ಕೆಳಗೆ ಬಿಳುತ್ತಿದ್ದಂತೆ,ಅದನ್ನು ಹಿಡಿಯಲು ಹೋಗಿ,ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಈ ಕುರಿತು ಮಹಾಗಾಂವ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


