August 30, 2026
Sunday, August 30, 2026
spot_img

ಸುಳ್ಯದ ಶ್ರೀರಾಂಪೇಟೆಯಲ್ಲಿ ಯುವಕರಿಗೆ ಚೂರಿ ಇರಿತ: ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಹೊಸ ದಿಗಂತ ವರದಿ, ಸುಳ್ಯ:

ಸುಳ್ಯದ ಶ್ರೀರಾಂಪೇಟೆಯಲ್ಲಿರುವ ರಾಜೇಶ್ ಬಾರ್ ಮುಂಭಾಗದಲ್ಲಿ ನಿಂತಿದ್ದ ಯುವಕರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದ ಘಟನೆ ಶನಿವಾರ ಸಂಜೆ ನಡೆದಿದ್ದು, ಆರೋಪಿಗಳನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರೆಸಲಾಗಿದೆ.

ಚೂರಿ ಇರಿತಕ್ಕೊಳಗಾದ ಯುವಕರನ್ನು ಸುಳ್ಯ ಬೀರಮಂಗಲ ಬಂಗ್ಲಗುಡ್ಡೆ ನಿವಾಸಿಗಳಾದ ಹರೀಶ್ ಬಂಗ್ಲಗುಡ್ಡೆ ಹಾಗೂ ನಿತೇಶ್ ಕೆ.ಆರ್ ಬಂಗ್ಲಗುಡ್ಡೆ ಎಂದು ಗುರುತಿಸಲಾಗಿದ್ದು, ಗಾಯಗೊಂಡ ಇಬ್ಬರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ .

ಚೂರಿ ಇರಿದ ಅಜ್ಜಾವರ ಗ್ರಾಮದ ಕಾಂತಮಂಗಲ ಗಂಧದಗುಡ್ಡೆ ನಿವಾಸಿಗಳಾದ ದಯಾನಂದ ಮತ್ತು ರಾಜೇಶ್ ಬಿ ಆರ್ ಎಂಬುವವರನ್ನು ಪೋಲಿಸ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಆರಂಬಿಸಿದ್ದು, ಚೂರಿ ಇರಿತಕ್ಕೆ ಕಾರಣವೇನು ಎಂಬುವುದನ್ನು ತನಿಖೆಯಿಂದ ಹೊರಬರಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !