ಕೆಎಸ್‌ಆರ್‌ಟಿಸಿ ಬಸ್‌ ಓಡಿಸುತ್ತಲೇ ಫೋನ್‌ನಲ್ಲಿ ಮಾತಾಡ್ತಿದ್ದ ಡ್ರೈವರ್‌ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಕಲನ ಕರ್ತವ್ಯವಾಗಿದೆ. ಚಾಲನೆ ಸಮಯದಲ್ಲಿ ಚಾಲಕ ಮೊಬೈಲ್​ನಲ್ಲಿ ಮಾತನಾಡುವುದು, ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಆದರೂ ಕೂಡ ಪುತ್ತೂರು ಡಿಪೋ ಬಸ್​ ಚಾಲಕ ಮೊಬೈಲ್​ ಬಳಸುತ್ತಾ ಚಾಲನೆ ಮಾಡಿದ್ದಾರೆ.

ಕೆಎಸ್‌ಆರ್‌ಟಿಸಿ ಚಾಲಕ ವೇಣುಗೋಪಾಲ್ ಬಸ್​ ಚಾಲನೆ ಮಾಡುತ್ತ ಮೊಬೈಲ್‌ ಬಳಕೆ ಮಾಡುತ್ತಿರುವ ವಿಡಿಯೋವನ್ನು ಪ್ರಯಾಣಿಕರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬಸ್​​​ ಮಡಿಕೇರಿಯಿಂದ ಬಿರುನಾಣಿಗೆ ಹೋಗುತ್ತಿತ್ತು. ಚಾಲಕ ಮೊಬೈಲ್​ ಬಳಕೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೊಬೈಲ್​ ಬಳಕೆ ಮಾಡುತ್ತಿರುವುದನ್ನು ವಿಡಿಯೋ ಮಾಡಿದ ವಿಚಾರಕ್ಕೆ ನಿರ್ವಾಹಕ ರೂಪೇಶ್ ಜೊತೆ ಚಾಲಕ ವೇಣುಗೋಪಾಲ್​​ ಗಲಾಟೆ ಮಾಡಿದ್ದಾನೆ. ಬಳಿಕ, ಚಾಲಕ ವೇಣುಗೋಪಾಲ್ ಡಿಪೋ ಬಳಿ ಕೋವಿ ತಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ರೂಪೇಶ್‌ನನ್ನು ಕೊಲೆ‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೆ ಸಾರಿಗೆ ಸಂಸ್ಥೆ ಚಾಲಕ ವೇಣುಗೋಪಾಲ್​​ನನ್ನು ಅಮಾನತು ಮಾಡಿದೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಪೊಲೀಸರು ಆರೋಪಿ ವೇಣುಗೋಪಾಲ್​ನನ್ನು ಬಂಧಿಸಿದ್ದಾರೆ. ಚಾಲಕ ವೇಣುಗೋಪಾಲ್ ವಿರುದ್ಧ ಈ ಹಿಂದೆಯೂ ಹಲವು ಬಾರಿ ಮೊಬೈಲ್‌ ಬಳಸಿದ್ದ ಆರೋಪ ಕೇಳಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!