ಉತ್ತಮ ಆರೋಗ್ಯಕ್ಕಾಗಿ ಹಸಿರು ತರಕಾರಿಗಳನ್ನು ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ. ಹಸಿರು ತರಕಾರಿಗಳ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ನುಗ್ಗೇಕಾಯಿ ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ನುಗ್ಗೇಕಾಯಿ ಸೊಪ್ಪನ್ನು ಮತ್ತು ಹೂವುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಸಹ ಬಳಸಲಾಗುತ್ತದೆ.
ಅಧಿಕ ರಕ್ತದೊತ್ತಡ ಇರುವವರಿಗೆ ನುಗ್ಗೇಕಾಯಿ ತಿನ್ನುವುದು ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಬಹುದು. ನುಗ್ಗೇಕಾಯಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ನುಗ್ಗೇಕಾಯಿ ಸೊಪ್ಪನ್ನು ಪೇಸ್ಟ್ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ಯೌವನದಿಂದ ಕೂಡಿರುತ್ತದೆ.
ಕೂದಲು ಉದುರುವಿಕೆ ಸಮಸ್ಯೆ ಇದ್ದರೆ ನುಗ್ಗೆಕಾಯಿ ಎಲೆಗಳನ್ನು ಬಳಸಬೇಕು. ನುಗ್ಗೆಕಾಯಿ ಸೊಪ್ಪನ್ನು ಒಣಗಿಸಿ ಅದನ್ನು ಪುಡಿ ಮಾಡಿ. ಅದಕ್ಕೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿಕೊಂಡು ಅದನ್ನು ಕೂದಲಿಗೆ ಹಚ್ಚಿ. ನುಗ್ಗೆಕಾಯಿ ಎಲೆಗಳ ಪುಡಿಯನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಹೆಚ್ಚು ಪರಿಣಾಮಕಾರಿ. ಪೇಸ್ಟ್ ಅನ್ನು ಕೂದಲಿಗೆ ಹಚ್ಚಿಕೊಂಡು 30 ನಿಮಿಷಗಳ ಕಾಲ ಹಾಗೇ ಬಿಡಬೇಕು, ಮಸಾಜ್ ಮಾಡಿ ನಂತರ ಶಾಂಪೂವಿನಿಂದ ತಲೆ ತೊಳೆದುಕೊಳ್ಳಿ.