ಹೊಸದಿಗಂತ ವರದಿ, ಕಲಬುರಗಿ:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ,ಗೆ ಜಾಮೀನು ಮಂಜೂರು ಆದ ಬೆನ್ನಲ್ಲೇ, ಕಲಬುರಗಿ ಡಿ ಬಾಸ್ ಅಭಿಮಾನಿಗಳು ಈಡುಗಾಯಿ ಒಡೆದು ಸಂಭ್ರಮಾಚರಣೆ ಮಾಡಿದ್ದಾರೆ.
ನಗರದ ಸೂಪರ್ ಮಾರ್ಕೆಟ್,ನಲ್ಲಿನ ಸಂಗಮ ಚಿತ್ರಮಂದಿರದ ಮುಂಭಾಗದಲ್ಲಿ ದರ್ಶನ,ಗೆ ಜಾಮೀನು ಆಗುತ್ತಿದ್ದಂತೆ,ಇತ್ತ ಡಿ ಬಾಸ್ ಅಭಿಮಾನಿಗಳು ಡಿ ಬಾಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಡಿ ಬಾಸ್ ಗೆ ಜೈವಾಗಲಿ ಎಂದು ಜೈಕಾರ ಹಾಕಿ ಸಂಭ್ರಮಿಸಿದ್ದಾರೆ.
ನಮ್ಮ ನೆಚ್ಚಿನ ನಟ ನಮ್ಮ ಡಿ ಬಾಸ್,ಗೆ ಜಾಮೀನು ಸಿಕ್ಕಿದ್ದು ನಮ್ಮೆಲ್ಲರಿಗೂ ಸಂತೋಷದ ಸಂಗತಿಯಾಗಿದೆ.ಅವರು ಹೊರಗಡೆ ಬಂದಿದ್ದು,ರಾಜ್ಯದ ಎಲ್ಲಾ ಅಭಿಮಾನಿಗಳ ದಿಲ್ ಖುಷ್ ಆಗಿದೆ. ಡಿ ಬಾಸ್ ನಟಿಸಿರುವ ಸಿನೆಮಾ ಬಿಡುಗಡೆ ಹೊತ್ತಿನಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಸಂಭ್ರಮಾಚರಣೆ ಮಾಡಲಾಗುವುದು ಎಂದು ಅಭಿಮಾನಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.