ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಮಂದಿ ಇಷ್ಟು ದಿನ ಟ್ರಾಫಿಕ್ ಸಿಗ್ನಲ್ ಗಳಲ್ಲಿ, ದೇವಾಲಯಗಳ ಮುಂದೆ, ಬಸ್ ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ಭಿಕ್ಷುಕರನ್ನು ನೋಡುತ್ತಿದ್ದರು. ಜೊತೆಗೆ ಕೆಎಸ್ಆರ್ ಟಿಸಿ ಬಸ್ ಗೆ ಹತ್ತಿ, ರೈಲಿಗಳಿಗೂ ಹತ್ತಿ ಭಿಕ್ಷೆ ಬೆಡೋದನ್ನ ನೋಡಿದ್ದೇವೆ. ಆದರೆ ಇಲ್ಲಿಯವರೆಗೂ ಮೆಟ್ರೋಗೆ ಕಾಲಿಟ್ಟಿರದ ಭಿಕ್ಷುಕರು ಈಗ ನಮ್ಮ ಮೆಟ್ರೋಗೂ ಕಾಲಿಟ್ಟಿದ್ದಾರೆ.
ನಮ್ಮ ಮೆಟ್ರೋ ರೈಲ್‌ನಲ್ಲೂ ಭಿಕ್ಷಾಟನೆ ಶುರುವಾಗಿದೆ. ಅಂಗವಿಕಲನೊಬ್ಬ ಮೆಟ್ರೋ ಟ್ರೈನ್ ಒಳಗೆಯೇ ಭಿಕ್ಷಾಟನೆ ಮಾಡುತ್ತಿದ್ದಾನೆ. ಈ ಭಿಕ್ಷುಕ ಪ್ರಯಾಣ ಮಾಡುವವರಂತೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಕೂಡ ಪಡೆದಿದ್ದಾನೆ. ಚಲಘಟ್ಟ ಟು ವೈಟ್ ಫೀಲ್ಡ್ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರಂತೆ ಬಂದಿರೋ ವ್ಯಕ್ತಿ, ಪ್ರಯಾಣಿಕರ ಬಳಿ ತನ್ನ ಊನವನ್ನು ತೋರಿಸಿ ಭಿಕ್ಷಾಟನೆ ನಡೆಸಿದ್ದಾನೆ.
ಮೆಟ್ರೋದಲ್ಲಿ ಈ ಭಿಕ್ಷುಕನನ್ನು ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ಇಷ್ಟುದಿನ ಮೆಟ್ರೋದಲ್ಲಿ ಭಿಕ್ಷುಕರ ಕಾಟ ಇರಲ್ಲ ಎಂದು ನೆಮ್ಮದಿಯಾಗಿ ಪ್ರಯಾಣ ಮಾಡುತ್ತಿದ್ದೇವು. ಆದರೆ ಈಗ ನೋಡಿದ್ರೆ ನಮ್ಮ ಮೆಟ್ರೊದಲ್ಲೂ ಭಿಕ್ಷೆ ಬೇಡೊದಕ್ಕೆ ಶುರು ಮಾಡಿಕೊಂಡು ಬಿಟ್ರಾ ಇವ್ರು ಎಂದು ಬಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.