ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ನೈಸರ್ಗಿಕವಾಗಿ ಮಗುವನ್ನು ಹೊಂದಲು ಎಷ್ಟೋ ದಂಪತಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸಾಕಷ್ಟು ಕಪಲ್ಸ್ ಇದೀಗ ಮಕ್ಕಳಿಗಾಗಿ ಐವಿಎಫ್ ಮೊರೆ ಹೋಗುತ್ತಿದ್ದಾರೆ. ಆದರೆ ಇದು ಸುಲಭವಾದ ಚಿಕಿತ್ಸೆ ಅಲ್ಲ, ದುಬಾರಿಯೂ ಹೌದು. ಹಾಗಾಗಿ ಎಲ್ಲ ವರ್ಗದವರೂ ಇದನ್ನು ಭರಿಸಲು ಸಾಧ್ಯವಾಗಿಲ್ಲ.
ಆದರೆ ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಐವಿಎಫ್ ಚಿಕಿತ್ಸೆ ಲಭ್ಯವಾಗಲಿದೆ. ಹೌದು, ಹೆಚ್ಚು ಹಣ ಇಲ್ಲದವರೂ ಈಗ ಐವಿಎಫ್ ಮೂಲಕ ಮಗುವನ್ನು ಪಡೆಯಬಹುದು. ಪ್ರಾರಂಭಿಕ ಹಂತದಲ್ಲಿ ಆರೋಗ್ಯ ಇಲಾಖೆ ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಉಚಿತ ಐವಿಎಫ್ ಚಿಕಿತ್ಸೆ ನೀಡಲು ಚಿಂತನೆ ಮಾಡಿದ್ದು, ಈಗ ಈ ವಿಚಾರವಾಗಿ ಸಮಗ್ರವಾದ ವರದಿಯೂ ತಜ್ಞರಿಂದ ಸಲ್ಲಿಕೆಯಾಗಿದೆ. ಇದರಿಂದ ಸಾಕಷ್ಟು ಜನರಿಗೆ ಉಪಯೋಗವಾಗಲಿದೆ.