ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ, ಕೊಲ್ಕತ್ತಾ, ಹೈದರಾಬಾದ್ ಮತ್ತು ಮುಂಬೈನಂತಹ ಮಹಾನಗರಗಳಲ್ಲಿ ಉಬರ್ ಷಟಲ್ ಬಸ್ ಸೇವೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸೇವೆಯನ್ನು ಪರಿಚಯಿಸಲು ಉಬರ್ ಮುಂದಾಗಿದೆ. ಇದಕ್ಕಾಗಿ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.
ಟ್ರಾಫಿಕ್ ಕಿರಿಕಿರಿಯಿಂದ ಬಸವಳಿದಿರುವ ಟೆಕ್ಕಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾರಂಭಿಕ ಹಂತದಲ್ಲಿ ಔಟರ್ ರಿಂಗ್ ರಸ್ತೆ ಟೆಕ್ ಕಾರಿಡಾರ್‌ನಲ್ಲಿ 200 ಹವಾನಿಯಂತ್ರಿತ ಬಸ್‌ಗಳನ್ನು ಓಡಿಸಲು ಉಬರ್ ಚಿಂತನೆ ನಡೆಸುತ್ತಿದೆ.
ಪ್ರಸ್ತಾವಿತ ಸೇವೆಯು 2-3 ನಿಮಿಷಗಳ ಮಧ್ಯಂತರದಲ್ಲಿ ಚಲಿಸುತ್ತದೆ, ಪ್ರಯಾಣಿಕರಿಗೆ ಆಸನಗಳನ್ನು ಮುಂಗಡ ಕಾಯ್ದಿರಿಸುವ, ಗೊತ್ತುಪಡಿಸಿದ ಸ್ಥಳಗಳಿಂದ ಪಿಕಪ್ ಮತ್ತು ಗಮ್ಯಸ್ಥಾನಗಳಿಗೆ ತಲುಪಿಸುವ ಕೆಲಸ ಮಾಡಲಿದೆ ಎಂದು ಉಬರ್ ಮಾಹಿತಿ ನೀಡಿದೆ.