ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚಮಸಾಲಿ 2ಎ ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಹೋರಾಟದ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್ಸದನದಲ್ಲಿ ಚರ್ಚೆ ತಾರಕಕ್ಕೇರಿದೆ.
ಪಂಚಮಸಾಲಿಗಳ ಮೇಲಿನ ಲಾಠಿ ಚಾರ್ಜ್ ಪ್ರಕರಣವನ್ನು ತನಿಖೆಗೆ ವಹಿಸುವಂತೆ ವಿಪಕ್ಷಗಳು ಆಗ್ರಹಿಸಿದ್ದಾರೆ. ಆದ್ರೆ, ಸರ್ಕಾರ ತನಿಖೆ ಮಾಡಿಸಲ್ಲ ಎಂದು ನಿಲುವು ತಿಳಿಸಿದ್ದು, ಹೆಚ್ಚಿನ ಚರ್ಚೆಗೆ ಸಭಾಪತಿಯವರು ಅವಕಾಶ ನೀಡಿಲ್ಲ ಇದರಿಂದ ರೊಚ್ಚಿಗೆದ್ದ ವಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.
ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ಗೆ ಸಂಬಂಧಿಸಿದಂತೆ ಸರ್ಕಾರ ತನಿಖೆ ಮಾಡಿಸಲ್ಲ ಅಂತ ನಿಲುವು ಹೇಳಿದೆ. ಇದಕ್ಕಿಂತ ಹೆಚ್ಚಿನ ಚರ್ಚೆಗೆ ಅವಕಾಶ ನೀಡಲ್ಲ ಎಂದು ಸಭಾಪತಿ ಸ್ಪಷ್ಟಪಡಿಸಿದರು. ಇದರ ಬೆನ್ನಲ್ಲೆ ಆಕ್ರೋಶಗೊಂಡ ವಿಪಕ್ಷಗಳು ಸಭಾತ್ಯಾಗ ಮಾಡಿದರು. ಈ ಸಂದರ್ಭದಲ್ಲಿ ಸರ್ವಾಧಿಕಾರಿ ಸರ್ಕಾರ, ಇದು ಲಾಠಿ ಬೂಟಿನ ಸರ್ಕಾರ ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಹೊರನಡೆದರು.
ಇನ್ನೂ ಇದಕ್ಕೂ ಮೊದಲು ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ ಮಾತನಾಡಿ, ಲಾಠಿಚಾರ್ಜ್ ಪ್ರಕರಣವನ್ನ ಗೃಹ ಸಚಿವರು ಸಮರ್ಥಿಸಿಕೊಂಡಿದ್ದಾರೆ. ಗೃಹ ಸಚಿವರ ಹೇಳಿಕೆ ತಪ್ಪಿಗೆ ಪ್ರಚೋಧನೆ ನೀಡಿದಂತೆ ಇದೆ. ಇವತ್ತು ಲಾಠಿಚಾರ್ಜ್ ಮಾಡಿದ್ದಾರೆ, ನಾಳೆ ಗೋಲಿಬಾರ್ ಮಾಡಿದ್ರು ಸರ್ಕಾರ ನಮ್ಮ ಪರವಾಗಿದೆ ಅನ್ನೋ ಮಾನಸಿಕತೆ ಪೊಲೀಸರಿಗೆ ಬರುತ್ತೆ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮದ್ಯಪ್ರವೇಶಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ಚರ್ ನ್ಯಾಯಾಂಗ ತನಿಖೆ ಸೇರಿದಂತೆ ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಮತ್ತಷ್ಟು ಕೋಪಗೊಂಡ ವಿಪಕ್ಷ ಸದಸ್ಯರು ಇದೊಂದು ಸರ್ವಾಧಿಕಾರಿ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಉತ್ತರಿಸಿದ ಡಾ.ಜಿ.ಪರಮೇಶ್ವರ್ ನೀವೇನೇ ಹೇಳಿದ್ರೂ ತನಿಖೆ ಮಾಡಿಸಲ್ಲ ಎಂದರು.
ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ವಿಪಕ್ಷಗಳ ಬಿಗಿಪಟ್ಟು ಹಿಡಿದರು. ಕೊನೆಗೆ ರೂಲಿಂಗ್ ಕೊಡುವಂತೆ ಸಭಾಪತಿಗೆ ವಿಪಕ್ಷದ ಸದಸ್ಯರು ಮನವಿ ಮಾಡಿದರು. ರೂಲಿಂಗ್ ಕೊಡಲು ಬರಲ್ಲ ಎಂದು ಸಭಾಪತಿಯವರು ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ ಪೀಠದಲ್ಲಿ ಸಾಕಷ್ಟು ಬಾರಿ ರೂಲಿಂಗ್ ಕೊಟ್ಟು ನೆರವಿಗೆ ಬಂದ ಉದಾಹರಣೆಗಳಿವೆ, ಸರ್ಕಾರದ ಕಿವಿ ಹಿಂಡಿರುವ ಅನೇಕ ಉದಾಹರಣೆಗಳಿವೆ ಎಂದು ಮನವಿ ಮಾಡಿದರು.