ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಿದ್ದರೆ ಎಷ್ಟು ಡಿಸ್‌ಅಡ್ವಾಂಟೇಜ್ ಇದೆಯೋ ಅಷ್ಟೇ ಅಡ್ವಾಂಟೇಜ್ ಕೂಡ ಇದೆ. ಸಾಮಾಜಿಕ ಜಾಲತಾಣದಲ್ಲಿ ಪುಟಾಣಿಯೊಬ್ಬಳ ಬೌಲಿಂಗ್ ವಿಡಿಯೋ ವೈರಲ್ ಆಗಿದ್ದು, ಇದನ್ನು ಸಚಿನ್ ತೆಂಡೂಲ್ಕರ್ ಗಮನಿಸಿದ್ದಾರೆ.
ವಿಡಿಯೋವನ್ನು ಅಪ್‌ಲೋಡ್ ಮಾಡಿ ಸುಶೀಲಾ ಮೀನಾ ಬೌಲಿಂಗ್ ನೋಡಿ, ಸ್ಮೂತ್ ಹಾಗೂ ಎಫರ್ಟ್‌ಲೆಸ್ ಆಗಿದೆ, ನಿಮಗೂ ಹೀಗೆ ಅನಿಸ್ತಿದ್ಯಾ ಎಂದು ಝಹೀರ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇತ್ತ ಈ ವಿಡಿಯೋವನ್ನು ಗಮನಿಸಿದ ಝಹೀರ್ ಖಾನ್ ಕೂಡ ಸುಶೀಲಾ ಮೀನಾ ಬೌಲಿಂಗ್ ಗಮನಿಸಿದ್ದು, ಆಕೆಯ ಬೌಲಿಂಗ್ ತನಗಿಂತ ತುಂಬಾ ಪರಿಣಾಮಕಾರಿಯಾಗಿದೆ. ಅವಳು ತನ್ನ ಚಿಕ್ಕ ವಯಸ್ಸಿನಲ್ಲಿ ತುಂಬಾ ಬಲಶಾಲಿಯಾಗಿ ಕಾಣುತ್ತಿದ್ದಾಳೆ ಎಂದು ಝಹೀರ್ ಖಾನ್ ಹೊಗಳಿದಿದ್ದಾರೆ.
ಈ ಇಬ್ಬರು ಕ್ರಿಕೆಟಿಗರ ಹೊಗಳಿಕೆಯ ಬೆನ್ನಲ್ಲೇ ಈ ವಿಡಿಯೋ ಆದಿತ್ಯ ಬಿರ್ಲಾ ಗ್ರೂಪ್ ಗಮನ ಸೆಳೆದಿದೆ. ಅಲ್ಲದೆ ಸುಶೀಲಾ ಮೀನಾ ಅವರ ಕ್ರಿಕೆಟ್ ತರಬೇತಿಗಾಗಿ ಎಲ್ಲಾ ರೀತಿಯ ನೆರವು ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಆದಿತ್ಯ ಬಿರ್ಲಾ ಗ್ರೂಪ್, ‘ಫೋರ್ಸ್ ಫಾರ್ ಗುಡ್’ ಯೋಜನೆಯ ಅಡಿಯಲ್ಲಿ, ಸುಶೀಲಾಗೆ ಕ್ರಿಕೆಟ್ ತರಬೇತಿ ನೀಡುತ್ತೇವೆ. ನಾವೆಲ್ಲರೂ ಸುಶೀಲಾ ಅವರಿಗಾಗಿ ಒಂದಾಗೋಣ… ಅವಳು ಮಿಂಚುವಂತೆ ಮಾಡೋಣ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸುಶೀಲಾ ಮೀನಾ ಅವರ ಕ್ರಿಕೆಟರ್ ಆಗಬೇಕೆಂಬ ಕನಸನ್ನು ನನಸಾಗಿಸಲು ಇದೀಗ ಆದಿತ್ಯ ಬಿರ್ಲಾ ಗ್ರೂಪ್ ಮುಂದಾಗಿದೆ.
ಒಟ್ಟಿನಲ್ಲಿ ಸಚಿನ್ ತೆಂಡೂಲ್ಕರ್ ಹಂಚಿಕೊಂಡ ಒಂದೇ ಒಂದು ವಿಡಿಯೋ ಇದೀಗ 12 ವರ್ಷದ ಪುಟ್ಟ ಬಾಲಕಿ ಸುಶೀಲಾ ಮೀನಾ ಅವರ ಭವಿಷ್ಯಕ್ಕೆ ಹೊಸ ದಾರಿ ತೋರಿಸಿಕೊಟ್ಟಿದೆ.
Smooth, effortless, and lovely to watch! Sushila Meena’s bowling action has shades of you, @ImZaheer.
Do you see it too? pic.twitter.com/yzfhntwXux— Sachin Tendulkar (@sachin_rt) December 20, 2024