ಹೊಸದಿಗಂತ ವರದಿ ಕಲಬುರಗಿ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಖಂಡಿಸಿ ಸಂವಿಧಾನ ಉಳಿಸಿ ಸಂಘಟನೆ ಕರೆ ನೀಡಿದ ಕಲಬುರಗಿ ಬಂದ್ ಗೆ ಬೆಳಿಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಬಹುತೇಕ ಎಲ್ಲಾ ಅಂಗಡಿ ಮುಂಗಡಗಳು ಬಂದಾಗಿದ್ದು, ನಗರದ ಪ್ರಮುಖ ಜೇವರ್ಗಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿದ್ದು , ಯಾವುದೇ ರೀತಿಯ ಅಹಿತಕರ ಘಟನೆ ಜರುಗಬಾರದ ಎಂಬ ಕಾರಣಕ್ಕೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪರದಾಡಿದ ಸಾರ್ವಜನಿಕರು
ಮಂಗಳವಾರ ಬೆಳ್ಳಂಬೆಳಿಗ್ಗೆ ಬೇರೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಆಟೋ ಸೇರಿದಂತೆ ಸಂಚಾರಿ ವಾಹನಗಳು ಸಿಗದೇ ಪರದಾಡಿದರು. ಕೆಲವರು ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ಮನೆಗಳತ್ತ ಸಾಗಿದರೇ, ಇನ್ನೂ ಕೆಲವರು ಆಟೋಗಳಿಗಾಗಿ ಕಾದು ಕುಳಿದ ಸನ್ನಿವೇಶಗಳು ಕಂಡು ಬಂದವು.