ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೊಲ್ಕತ್ತಾ ಆರ್.ಜಿ. ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆದ ರೇಪ್ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯವು (ಸಿಎಫ್ಎಸ್ಎಲ್) ಸಿಬಿಐಗೆ ವರದಿ ಸಲ್ಲಿಸಿದೆ.
ಟ್ರೈನಿ ವೈದ್ಯೆ ಮೃತದೇಹ ಪತ್ತೆಯಾದ ಸೆಮಿನಾರ್ ಹಾಲ್ನಲ್ಲಿ ಘರ್ಷಣೆ ಪ್ರತಿರೋಧ ನಡೆದಿರುವ ಬಗ್ಗೆ ಸ್ಪಷ್ಟ ಚಿತ್ರಣಗಳಿಲ್ಲ ಎಂದು ತನ್ನ ವರದಿಯಲ್ಲಿ ಸಿಎಫ್ಎಸ್ಎಲ್ನಲ್ಲಿ ಉಲ್ಲೇಖಿಸಿರಿವುದಾಗಿ ತಿಳಿದುಬಂದಿದೆ.
ಸಿಬಿಐಗೆ ಸಲ್ಲಿಸಿದ ವರದಿಯಲ್ಲಿ ಸಾಕ್ಷ್ಯಗಳಿಲ್ಲದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಯ ಸಿಎಫ್ಎಸ್ಎಲ್ನ ತಜ್ಞರು ಕಳೆದ ಆಗಸ್ಟ್ 14ರಂದು ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಪರಿಶೀಲಿಸಿದ್ದರು.
ಈ ವೇಳೆ ಅತ್ಯಾಚಾರಿ ಎದುರು ಸಂತ್ರಸ್ತೆ ತೋರಿಸಿದ ಸಂಭಾವ್ಯ ಹೋರಾಟ ಅಥವಾ ಅವರ ನಡುವಿನ ಪ್ರತಿರೋಧದ ಸಾಕ್ಷ್ಯವು ಸ್ಥಳದಲ್ಲಿ ಕಾಣೆಯಾಗಿದೆ. ಕೆಲವು ಪ್ರಮುಖ ಸಾಕ್ಷ್ಯಗಳು ಸ್ಥಳದಲ್ಲಿ ಕಂಡುಬಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ ಎಂದು ಸಿಬಿಐ ಮೂಲಗಳು ಕೋರ್ಟ್ಗೆ ತಿಳಿಸಿವೆ.
ಕಳೆದ ಆಗಸ್ಟ್ನಲ್ಲಿ ಪ್ರಕರಣ ನಡೆದ ಬಳಿಕ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಪ್ರಗತಿ ವರದಿಯನ್ನ ಸಲ್ಲಿಸಲು ಕೋಲ್ಕತ್ತಾ ಹೈಕೋರ್ಟ್ ಸಿಬಿಐಗೆ ಗಡುವು ನೀಡಿತ್ತು. ಮತ್ತೆ ಗಡುವು ನೀಡಿದ್ದ ಅವಧಿಯನ್ನು ವಿಸ್ತರಣೆ ಮಾಡಿತ್ತು.