ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ ಅಭಿನಯದ ಮ್ಯಾಕ್ಸ್ ಸಿನಿಮಾ ಯಾವುದೇ ಆಡಂಬರ ಇಲ್ಲದೆ ಸಿಂಪಲ್ ಆಗಿ ರಿಲೀಸ್ ಆಗಿದೆ. ರಿಲೀಸ್ ಆಗಿ ಎರಡು ದಿನ ಕಳೆದಿದ್ದು, ಉತ್ತಮ ಕಮಾಯಿ ಕೂಡ ಮಾಡಿದೆ.
ಆದರೆ ಸಿನಿಮಾ ಟೀಂ ದೊಡ್ಡ ಎಡವಟ್ಟೊಂದನ್ನು ಮಾಡಿಕೊಂಡು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸಿನಿಮಾ ಶುರುವಿನಲ್ಲಿ ನಟರ ಹೆಸರು ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರ ಹೆಸರನ್ನು ಹಾಕಲಾಗುತ್ತದೆ. ಈ ವೇಳೆ ಸುದೀಪ್ ಹೆಸರನ್ನೇ ಟೀಂ ತಪ್ಪಾಗಿ ಬರೆದಿದೆ. ಅಭಿನಯ ಚಕ್ರವರ್ತಿ, ಬಾದ್ಷಾ ಕಿಚ್ಚ ಸುದೀಪ ಎಂದು ಬರೆಯುವ ಬದಲು ಅಭಿನಯ ಚತ್ರವರ್ತಿ ಬಾದ್ ಷಾ ಕಿಚ್ಚ ಸುದೀಪ ಎಂದು ಬರೆದಿದೆ.
ಟ್ರೋಲ್ ಪೇಜಸ್ಗಳಲ್ಲಿ ಇದು ವೈರಲ್ ಆಗುತ್ತಿದ್ದು, ನಮ್ಮ ಕನ್ನಡದವರಿಗೆ ಕೆಲಸ ಕೊಟ್ಟಿದ್ದರೆ ಇಷ್ಟು ತಪ್ಪು ಆಗುತ್ತಿರಲಿಲ್ಲ ಎಂದು ಹೇಳುತ್ತಿವೆ.