ಹೊಸದಿಗಂತ ವರದಿ,ಮಂಗಳೂರು:
ಮಂಗಳೂರು ಪಣಂಬೂರಿನ ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ ಎರಡನೇ ಪ್ರವಾಸಿ ಹಡಗು ಸೆವೆನ್ ಸೀಸ್ ವೊಯೋಜರ್ ಶುಕ್ರವಾರ ಆಗಮಿಸಿದೆ.
ದ್ವೀಪ ರಾಷ್ಟ್ರ ಬಹಮಾಸ್‌ನಿಂದ ಮುಂಬೈ ಗೋವಾ ಮೂಲಕ ಮಂಗಳೂರು ಬಂದರಿಗೆ ಆಗಮಿಸಿದ ಈ ಹಡಗಿನಲ್ಲಿ 650 ಪ್ರವಾಸಿಗರು ಮತ್ತು 450 ಸಿಬ್ಬಂದಿ ಬಂದಿಳಿದರು.
ದೂರದೂರುಗಳಿಂದ ಬಂದಿಳಿದ ಪ್ರವಾಸಿಗರಿಗೆ ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ಕೋರಲಾಯಿತು. ಬಳಿಕ ಪ್ರವಾಸಿಗರು ನಗರದ ವಿವಿಧ ಮಾಲ್‌ಗಳಿಗೆ ಬೇಟಿ ನೀಡಿದರು. ಅಲ್ಲದೆ ಕಾರ್ಕಳದ ಗೋಮಟೇಶ್ವರ, ಮೂಡುಬಿದಿರೆಯ ಸಾವಿರ ಕಂಬದ ಬಸದಿ , ಸೋನ್ಸ್ ಫಾರ್ಮ್, ಕಲ್ಬಾವಿ ಕ್ಯಾಶ್ಯೂ ಫ್ಯಾಕ್ಟರಿ, ಗೋಕರ್ಣನಾಥ ದೇವಸ್ಥಾನದ ಮೊದಲಾದ ಪ್ರದೇಶಗಳನ್ನು ಸಂದರ್ಶಿಸಿದರು. ಸಾಯಂಕಾಲ ಪ್ರವಾಸಿ ಹಡಗು ಮಂಗಳೂರಿನಿಂದ ಕೊಚ್ಚಿನ್ ಬಂದರಿಗೆ ಪ್ರಯಾಣ ಮುಂದುವರಿಸಿದೆ.