ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಬಾಲಿವುಡ್ ಚಿತ್ರ ‘ಸಿಖಂದರ್’ನ ಟೀಸರ್ ಬಿಡುಗಡೆಯಾಗಿದೆ.
ಸಲ್ಮಾನ್ ಖಾನ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಸಲ್ಮಾನ್ ಅವರ ಅವತಾರಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
‘ಸಿಖಂದರ್’ 1:41 ನಿಮಿಷದ ಟೀಸರ್ ಇದಾಗಿದ್ದು, ಬಹಳಷ್ಟು ಜನ ನನ್ನ ಹಿಂದೆ ಬಿದ್ದಿದ್ದಾರೆ ಎಂದು ಕೇಳಿದ್ದೇನೆ. ಆದರೆ ನಾನು ತಿರುಗಿ ಬೀಳುವವರೆಗೆ ಮಾತ್ರ ಎಂದು ಸಲ್ಮಾನ್ ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ರಿಯಲ್ ಆಗಿಯೂ ಎದುರಾಳಿಗಳಿಗೆ ಈ ಡೈಲಾಗ್ ಠಕ್ಕರ್ ಕೊಡುವಂತಿದೆ. ಇನ್ನೂ ಟೀಸರ್ನಲ್ಲಿ ಸಖತ್ ಸ್ಟೈಲೀಶ್ ಮತ್ತು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.