ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಿಗ್ಗಿ ಮತ್ತು ಝೊಮ್ಯಾಟೊ ಈ ಎರಡು ಪ್ರಮುಖ ಅಪ್ಲಿಕೇಷನ್ಗಳಲ್ಲಿಯೇ ಜನ ಹೆಚ್ಚು ಆನ್ಲೈನ್ ಆರ್ಡರ್ ಮಾಡುತ್ತಿರುತ್ತಾರೆ. ಈ ಎರಡೂ ಕಂಪೆನಿಗಳು ಪ್ರತಿ ವರ್ಷ ಕೂಡಾ ವರ್ಷಾಂತ್ಯದಲ್ಲಿ ತಮ್ಮಲ್ಲಿ ಗ್ರಾಹಕರು ಜಾಸ್ತಿ ಆರ್ಡರ್ ಮಾಡಿದಂತಹ ಆಹಾಗಳು ಯಾವುವು? ಎಷ್ಟು ಫುಡ್ ಸೇಲ್ ಆಗಿವೆ ಈ ಎಲ್ಲದರ ಡೇಟಾವನ್ನು ಹಂಚಿಕೊಳ್ಳುತ್ತವೆ. ಇದೀಗ 2024 ರಲ್ಲಿ ಅತೀ ಹೆಚ್ಚು ಆರ್ಡರ್ ಆದ ಫುಡ್ ಯಾವುದು ಎಂಬ ಬಗ್ಗೆ ವರದಿಯನ್ನು ಹಂಚಿಕೊಂಡಿದ್ದು, ಸ್ವಿಗ್ಗಿ-ಝೊಮ್ಯಾಟೊದಲ್ಲಿ ಯಾವ ಫುಡ್ ಅನ್ನು ಗ್ರಾಹಕರು ಅತೀ ಹೆಚ್ಚು ಆರ್ಡರ್ ಮಾಡಿದ್ದಾರೆ? ಗೆಸ್ ಮಾಡಿ..
ಝೊಮ್ಯಾಟೊ ತನ್ನ 2024 ರ ವರದಿಯನ್ನು ಅನಾವರಣಗೊಳಿಸದ್ದು, ನಮ್ಮಲ್ಲಿ ಬಿರಿಯಾನಿಯನ್ನು ಹೆಚ್ಚು ಆರ್ಡರ್ ಮಾಡಲಾಗಿತ್ತು ಎಂದು ಹೇಳಿದೆ. 2024ರಲ್ಲಿ ಒಂಬತ್ತು ಕೋಟಿಗೂ ಹೆಚ್ಚು ಬಿರಿಯಾನಿಯನ್ನು ಝೊಮಾಟೊದಲ್ಲಿ ಆರ್ಡರ್ ಮಾಡಲಾಗಿದೆ. ಆದರೆ 2023ಕ್ಕೆ ಹೋಲಿಸಿದರೆ ಇದು ಸುಮಾರು ಒಂದು ಕೋಟಿ ಆರ್ಡರ್ಗಳ ಕುಸಿತ ಕಂಡಿದೆ. ಹೌದು 2023 ರಲ್ಲಿ, ಝೊಮಾಟೊದಲ್ಲಿ ಸುಮಾರು 10,09,80,615 ಬಿರಿಯಾನಿ ಆರ್ಡರ್ ಮಾಡಲಾಗಿತ್ತು.
ಝೊಮ್ಯಾಟೊ ಪ್ರತಿ ಸೆಕೆಂಡಿಗೆ ಮೂರು ಬಿರಿಯಾನಿ ಆರ್ಡರ್ಗಳನ್ನು ಪಡೆದರೆ, ಸ್ವಿಗ್ಗಿ ಪ್ರತಿ ಸೆಕೆಂಡಿಗೆ ಎರಡು ಬಿರಿಯಾನಿ ಆರ್ಡರ್ಗಳನ್ನು ಪಡೆದಿದೆ. ಇನ್ನೂ ಪಿಜ್ಜಾದ ವಿಷಯಕ್ಕೆ ಬಂದ್ರೆ ಝೊಮ್ಯಾಟೊದಲ್ಲಿ ಪಿಜ್ಜಾ ಆರ್ಡರ್ಗಳ ಸಂಖ್ಯೆಯು 2023 ರಲ್ಲಿ 7,45,30,036 ರಷ್ಟಿತ್ತು. ಆದರೆ ಈ ವರ್ಷ 5,84,46,908 ಕ್ಕೆ ಇಳಿದಿದೆ. ಇದು ಶೇಕಡಾ 20% ರಷ್ಟು ಇಳಿಕೆ ಕಂಡಿದೆ.
ಇನ್ನೂ 2024 ರಲ್ಲಿ 2.3 ಕೋಟಿ ಆರ್ಡರ್ಗಳೊಂದಿಗೆ ದೋಸೆ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸ್ವಿಗ್ಗಿ ಡೇಟಾ ಬಹಿರಂಗಪಡಿಸಿದೆ. ಸ್ವಿಗ್ಗಿಯ 2024 ರ ವರದಿಯ ಪ್ರಕಾರ 2.3 ಕೋಟಿ ದೋಸೆಗಳನ್ನು ಆರ್ಡರ್ ಮಾಡಲಾಗಿದೆ. ಝೊಮ್ಯಾಟೊದಲ್ಲಿ ಎರಡನೇ ಸ್ಥಾನವನ್ನು ಪಿಜ್ಜಾ ಪಡೆದುಕೊಂಡಿದೆ. , ಝೊಮ್ಯಾಟೊ ದೇಶಾದ್ಯಂತ 5,84,46,908 ಪಿಜ್ಜಾ ಆರ್ಡರ್ಗಳನ್ನು ವಿತರಿಸಿದೆ.