ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತಿ ಮರಣದ ನಂತರ ಮಗ ಹಾಗೂ ಸೊಸೆ ಜೊತೆ ಜೀವ ಇರುವವರೆಗೂ ಬದುಕುವ ಎಷ್ಟೋ ತಾಯಂದಿರಿದ್ದಾರೆ. ಆಗಾಗ ಬಾಳಿಗೆ ಜೊತೆಗಾರ ಬೇಕು ಎನಿಸಿದರೂ ಮಕ್ಕಳಿದ್ದಾರಲ್ಲಾ ಸಾಕು ಜೀವನಕ್ಕೆ ಎಂದುಕೊಳ್ಳುತ್ತಾರೆ. ಆದರೆ ನಿನಗೂ ಒಂದು ಪರ್ಸನಲ್ ಲೈಫ್ ಇದೆ. ನಿನ್ನ ಸಂತೋಷ ಕೂಡ ಮುಖ್ಯ ಎಂದು ಇಲ್ಲೊಬ್ಬ ಮಗ ತಾಯಿಗೆ ಮದುವೆ ಮಾಡಿಸಿದ್ದಾನೆ.
18 ವರ್ಷಗಳ ಕಾಲ ನಮಗಾಗಿ ನಿಸ್ವಾರ್ಥದಿಂದ ಬದುಕಿದ ನನ್ನ ತಾಯಿಗೂ ಪ್ರೀತಿ ಜೀವನದಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎಂದು ಈ ಯುವಕ ಒಂಟಿಯಾಗಿದ್ದ ತನ್ನ ತಾಯಿಗೆ ಮರು ಮದುವೆಯನ್ನು ಮಾಡಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದಿದೆ.
ಪಾಕಿಸ್ತಾನದ ಯುವಕ ಅಬ್ದುಲ್ ಅಹದ್ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸುವ ಮೂಲಕ ಸುದ್ದಿಯಲ್ಲಿದ್ದಾನೆ. ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎನ್ನುತ್ತಾ ತನ್ನ ತಾಯಿಯ ಖುಷಿಗಾಗಿ ಅಹದ್ ಅಮ್ಮನಿಗೆ ಎರಡನೇ ಮದುವೆಯನ್ನು ಮಾಡಿಸಿದ್ದಾನೆ.
View this post on Instagram