February 3, 2026
Tuesday, February 3, 2026
spot_img

ಬಾಲಕಿ ಮೇಲಿನ ಗ್ಯಾಂಗ್ ರೇ*ಪ್ ಪ್ರಕರಣ: ಆರೋಪಿತರಿಗೆ ಇಂದು ಶಿಕ್ಷೆ ಪ್ರಕಟ

ಹೊಸದಿಗಂತ ವರದಿ ಬೆಳಗಾವಿ:

ಕಳೆದ ವರ್ಷ ಮೇ ನಲ್ಲಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗ್ಯಾಂಗ್ ರೇಪ್ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು, ಇಂದು ಮಧ್ಯಾಹ್ನ ಶಿಕ್ಷೆ ಪ್ರಮಾಣ ಪ್ರಕಟಗೊಳ್ಳಲಿದೆ. ಬಾಲಕಿಯೊಬ್ಬಳನ್ನು ಬೆಳಗಾವಿ ನಗರದಿಂದ ಪುಸಲಾಯಿಸಿ, ನಗರ ಹೊರವಲಯದ ಫಾರ್ಮಹೌಸವೊಂದರಲ್ಲಿ ಗ್ಯಾಂಗ್ ರೇಪ್ ನಡೆಸಲಾದ ಪ್ರಕರಣದಲ್ಲಿ ಒಟ್ಟು 6ಜನರನ್ನು ಮಾರ್ಕೇಟ್ ಪೊಲೀಸರು ಬಂಧಿಸಿದ್ದರು.

ಬಾಲಕಿಯನ್ನು ಮೂರು ಜನ ಅಪಹರಿಸಿಕೊಂಡು ಹೋಗಿ ಈ ಕುಕೃತ್ಯ ನಡೆಸಿದ್ದರು. ಪ್ರಕರಣದಲ್ಲಿ ಫಾರ್ಮ್ ಹೌಸ್ ಮಾಲೀಕ ಸೇರಿ ಬಂಧಿಸಲಾದ ಓಟ್ಟು 6 ಜನರಲ್ಲಿ ಇಬ್ಬರು ಅಪ್ರಾಪ್ತ ಬಾಲಕರಾಗಿದ್ದರು. ನಾಲ್ಕು ಜನರ ವಿರುದ್ದ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದ್ದು, ಇನ್ನುಳಿದ ಅಪ್ರಾಪ್ತ ಬಾಲಕರ ವಿರುದ್ಧವೂ ವಿಚಾರಣೆ ನಡೆಯಲಿದೆ.

ಮಾರ್ಕೇಟ್ ಠಾಣೆ ಅಂದಿನ ಇನ್ಸಪೆಕ್ಟರ್ ಧಾಮಣ್ಣವರ ತನಿಖೆ ನಡೆಸಿ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪೊಲೀಸ್ ಇನ್ಸಪೆಕ್ಟರ್ ಒಬ್ಬರ ಪುತ್ರ ಸಹ ಈ ಅತ್ಯಾಚಾರ ಕೃತ್ಯದಲ್ಲಿ ಭಾಗವಹಿಸಿದ್ದು, ಖೇದ ಮೂಡಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !