October 8, 2026
Thursday, October 8, 2026
spot_img

ಸಿನಿಮಾಗೆ ಕಥೆಯೇ ಹೀರೋ ಎಂದು ಸಾಬೀತುಪಡಿಸಿದ ಪ್ರೇಮದ ಊರಲಿ: ಒಂದೇ ದಿನ 3.75 ಕೋಟಿ ರೂಪಾಯಿ ಕಲೆಕ್ಷನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೀರೋ, ಹೀರೋಯಿನ್ ಯಾರೇ ಆಗಿರಲಿ, ಸಿನಿಮಾ ಕಥೆ ಚೆನ್ನಾಗಿದ್ದರೆ ಫಿಲಂ ಹಿಟ್‌ ಆಗುತ್ತದೆ ಅನ್ನೋದಕ್ಕೆ ಪ್ರೇಮದ ಊರಲಿ ಸಿನಿಮಾ ಸಾಕ್ಷಿಯಾಗಿದೆ. ಕೆಲವು ದಿನಗಳ ಹಿಂದೆ ಯಶ್‌, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್‌, ಹಿಮಾ ಖುರೇಷಿ ಇನ್ನಿತರ ಬಿಗ್‌ ಸ್ಟಾರ್‌ ಕಾಸ್ಟ್‌ ಇರುವ ಸಿನಿಮಾ ರಿಲೀಸ್‌ ಆಗಿತ್ತು. ಆದರೆ ಸಿನಿಮಾ ಅಂದುಕೊಂಡ ಮಟ್ಟಿಗೆ ಸದ್ದು ಮಾಡಲಿಲ್ಲ. ಇದಕ್ಕೆಲ್ಲ ಸ್ಟೋರಿಯೇ ಕಾರಣ ಎಂದು ಅಭಿಮಾನಿಗಳು ಹೇಳಿದ್ದರು. ಇದೀಗ ಕಡಿಮೆ ಬಜೆಟ್‌ನಲ್ಲಿ ಮಾಡಿದ ಸಿನಿಮಾವೊಂದು ಜನರ ಮನಸ್ಸನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ.

ಇತ್ತೀಚೆಗಷ್ಟೇ ರಿಲೀಸ್‌ ಆಗಿದ್ದ ಹನುಮಾನ್‌ ಅಂಶ ಸಿನಿಮಾ ಕೂಡ ಬರೀ ಮೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿತ್ತು. ಆದರೆ ಬರೋಬ್ಬರಿ ಮುನ್ನೂರು ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿತ್ತು. ಕಡಿಮೆ ಬಜೆಟ್‌ ಆದರೂ ಕೋಟಿಗಳು ದಾಟುತ್ತಿರುವ ಸಿನಿಮಾಗಳ ಲಿಸ್ಟ್‌ನಲ್ಲಿ ಪ್ರೇಮದ ಊರಲಿ ಸಿನಿಮಾ ಕೂಡ ಸೇರಿಕೊಂಡಿದೆ.

ಸೆಪ್ಟಂಬರ್​ 25ರಂದು ತೆರೆಕಂಡ ‘ಪ್ರೇಮದ ಊರಲಿ’ ತನ್ನ 13ನೇ ದಿನ ಬರೋಬ್ಬರಿ 4.50 ಕೋಟಿ ರೂ. ಗ್ರಾಸ್ ಕಲೆಕ್ಷನ್​ ಮಾಡಿದೆ. ಈ ಪೈಕಿ 3.85 ಕೋಟಿ ರೂ. ನೆಟ್​​ ಕಲೆಕ್ಷನ್​ ಆಗಿದೆ.​​ ಈ ಚಿತ್ರ ತೆರೆಕಂಡ ದಿನ ಕೇವಲ 10 ಲಕ್ಷ ರೂಪಾಯಿ ಗ್ರಾಸ್​​ ಕಲೆಕ್ಷನ್ ಮಾಡಿತ್ತು. ಆದರೆ ಪ್ರೇಕ್ಷಕರ ಸಕಾರಾತ್ಮಕ ಬಾಯ್ಮಾತಿನ ಪ್ರಚಾರ ಚಿತ್ರಮಂದಿರಗಳತ್ತ ಜನಸಾಗರ ಹರಿದುಬರಲು ಕಾರಣವಾಯಿತು.

ಶೋಗಳ ಸಂಖ್ಯೆಯಲ್ಲಿ ಹೆಚ್ಚಳ: ಚಿತ್ರಮಂದಿರಗಳಲ್ಲಿ ಶೋಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಪ್ರೇಕ್ಷಕರ ಸಂಖ್ಯೆ, ಬೇಡಿಕೆ ಹೆಚ್ಚುತ್ತಿರುವುದರಿಂದ ಹೆಚ್ಚಿನ ಸ್ಕ್ರೀನ್​ಗಳಲ್ಲಿ ಈ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿದೆ. ಮೊದಲ ದಿನ ಕೇವಲ 60 ಶೋಗಳಲ್ಲಿ ಸಿನಿಮಾ ಪ್ರದರ್ಶನಗೊಂಡಿತ್ತು. ಶೇ.28ರಷ್ಟು ಆಕ್ಯುಪೆನ್ಸಿ ರೇಟ್​ ದಾಖಲಾಗಿತ್ತು. ಸಿನಿಮಾ ಕ್ರೇಜ್​ ಹೆಚ್ಚಿದ ಹಿನ್ನೆಲೆ, ಪ್ರತಿದಿನವೂ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಅದರಂತೆ ಬುಧವಾರದಂದು ಸಿನಿಮಾ 911 ಶೋಗಳಲ್ಲಿ ಪ್ರದರ್ಶನ ಕಂಡಿದೆ. ಇಂದು ಕೂಡ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಫುಲ್‌ ಹೌಸ್‌ ಆಗಿದೆ.

Must Read