February 3, 2026
Tuesday, February 3, 2026
spot_img

ದನ ಕರುಗಳ ಅಪಘಾತ ತಪ್ಪಿಸಲು ರಿಪ್ಲೇಕ್ಟ್ ಬೆಲ್ಟ್ ಅಳವಡಿಕೆ: ಸಾರ್ವಜನಿಕರಿಂದ ಮೆಚ್ಚುಗೆ

ಹೊಸದಿಗಂತ ವರದಿ ಬೆಳಗಾವಿ:

ಇತ್ತೀಚಿನ ದಿನಗಳಲ್ಲಿ ಅದರಲ್ಲಿ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಚಲಿಸುವ, ಮಲಗಿರುವ ದನ ಕರುಗಳಿಗೆ ಅಪಘಾತ ಹೆಚ್ಚಿಗೆ ಆಗುತ್ತಿರುವುದರಿಂದ ಅಪಘಾತ ತಪ್ಪಿಸಲು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಹಾಗೂ ಸ್ನೇಹಿತರ ಸಹಕಾರದಲ್ಲಿ ಬೆಳಗಾವಿ ಸೇವಾ ಸಂಸ್ಥೆಯು ನಗರದಲ್ಲಿ ಓಡಾಡುವ ದನ ಕರುಗಳಿಗೆ ರಿಪ್ಲೇಕ್ಟ್ ಬೆಲ್ಟ್ ಅಳವಡಿಸುವ ಮೂಲಕ ದನ ಕರುಗಳ ರಕ್ಷಣೆಗೆ ಈ ತಂಡ ಕೆಲಸ ಮಾಡುತ್ತಿರುವುದರಿಂದ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗೋಮಾತೆಯನ್ನು ಪೂಜಿಸುವ ಜೊತೆಗೆ ಗೋವುಗಳ ರಕ್ಷಿಸೋಣ ಎನ್ನುತ್ತಿದ್ದಾರೆ ಹಿಂದು ಕಲಿಗಳು. ರಾತ್ರಿ ಹೊತ್ತಿನಲ್ಲಿ ಸಂಭವಿಸುತ್ತಿರುವ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ, ಬೆಳಗಾವಿ ಸೇವಾ ಸಂಸ್ಥೆಯ ಸದಸ್ಯರೊಂದಿಗೆ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !