ಹೊಸದಿಗಂತ ಹುಣಸೂರು :
ತಾಲೂಕಿನ ಹೊಸ ರಾಮನಹಳ್ಳಿ ಎಂಬ ಗ್ರಾಮದಲ್ಲಿ ಹೊಸ ವರ್ಷ ಆಚರಣೆ ಮುಗಿಸಿದ ಮಿಕ್ಕಿದ ಕೆಕ್ ತಿಂದು 45ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ ವಾಗಿರುವ ಘಟನೆ ಹೊಸ ರಾಮೇನಹಳ್ಳಿ ಗ್ರಾಮದ ಮಂಜುನಾಥ ವಿದ್ಯಾಸಂಸ್ಥೆಯಲ್ಲಿ ನಡೆದಿದೆ.
ಅನಾರೋಗ್ಯಕ್ಕೆ ತುತ್ತಾದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಮುಂದಾಗಲಾಗಿದೆ ಮಕ್ಕಳಿಗೆಲ್ಲ ವಾಂತಿ ಭೇದಿ ಹೆಚ್ಚು ಕಂಡು ಬಂದಿದ್ದು ವೈದ್ಯರಾದ ದ್ರಾಕ್ಷಿಣಿ ರವರು ಮಕ್ಕಳನ್ನು ಗುಣಪಡಿಸುವಲ್ಲಿ ಮುಂದಾಗಿದ್ದಾರೆ. ಆಸ್ಪತ್ರೆಗೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಹದೇವ ರವರು ಆಸ್ಪತ್ರೆಗೆ ಭೇಟಿ ನೀಡಿ ಪ್ರಾಂಶುಪಾಲರಾದ ಅಶ್ವತ್ ರವರಿಗೆ ತರಾಟೆಗೆ ತೆಗೆದುಕೊಂಡು ಅನಾರೋಗ್ಯಕ್ಕೆ ತುತ್ತಾದ ಮಕ್ಕಳನ್ನು ವಿಚಾರಣೆ ಮಾಡಿದ್ದಾರೆ