ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಶ್ವರ್ಯಾ ರೈ-ಆರಾಧ್ಯಾ ಬೇರೆ ಕಡೆ ವಾಸಿಸುತ್ತಿದ್ದು, ಅಭಿಷೇಕ್ ಅವರಿಂದ ದೂರವೇ ಇದ್ದಾರೆ ಎಂದೆಲ್ಲ ಸಾಕಷ್ಟು ವದಂತಿಗಳು ಹಬ್ಬಿದ್ದವು. ಆದರೆ, ಈ ವದಂತಿಗಳಿಗೆ ಇತ್ತೀಚೆಗೆ ತೆರೆ ಬಿದ್ದಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಇದ್ದಾರೆ.
ಈಗ ಐಶ್ವರ್ಯಾ ಹಾಗೂ ಆರಾಧ್ಯಾ ಒಟ್ಟಾಗಿ ಬರುವಾಗ ಅಭಿಷೇಕ್ ಭದ್ರತೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಐಶ್ವರ್ಯಾ ಹಾಗೂ ಅಭಿಷೇಕ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ದೊಡ್ಡ ಸೆಲೆಬ್ರಿಟಿಗಳು ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡುವ ಕೆಲಸ ಮಾಡುವುದಿಲ್ಲ. ಆದಾಗ್ಯೂ ಅಭಿಷೇಕ್ ಹಾಗೂ ಅಮಿತಾಭ್ ಅವರು ಡಿವೋರ್ಸ್ ವದಂತಿ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು. ಎಲ್ಲವೂ ಸರಿ ಇದೆ ಎಂದು ಹೇಳಿದ್ದರು. ಈಗ ಇವರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈ ವಿಚಾರ ಫ್ಯಾನ್ಸ್ಗಳಿಗೆ ಖುಷಿ ನೀಡಿದೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ.
ಐಶ್ವರ್ಯಾ, ಆರಾಧ್ಯಾ ಹಾಗೂ ಅಭಿಷೇಕ್ ಹೊಸ ವರ್ಷದ ಸಂದರ್ಭದಲ್ಲಿ ಸುತ್ತಾಟ ನಡೆಸಿದ್ದರು ಎನ್ನಲಾಗಿದೆ. ಈಗ ಅವರು ವಿಮಾನ ನಿಲ್ದಾಣದಿಂದ ಹೊರ ಬಂದಿದ್ದಾರೆ. ಅಭಿಷೇಕ್ ಹಾಗೂ ಐಶ್ವರ್ಯಾ ಎದುರು ಅಭಿಷೇಕ್ ನಡೆದು ಬಂದಿದ್ದಾರೆ.