BBMP ಕಸದ ಲಾರಿ ಹರಿದು ಇಬ್ಬರ ಸಹೋದರಿಯರ ದುರ್ಮರಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯದಲ್ಲಿ ಶನಿವಾರ ನಡೆದಿದೆ.

ಮೃತರನ್ನು ನಿಘಾರ್ ಸುಲ್ತಾನ್ (30), ನಿಘಾರ್ ಇರ್ಫಾನ್ (32) ಎಂದು ಗುರುತಿಸಲಾಗಿದೆ. ಇಬ್ಬರು ಮಹಿಳೆಯರು ಟಿವಿಎಸ್ ಜೂಬಿಟರ್ ಸ್ಕೂಟಿಯಲ್ಲಿ ಗೋವಿಂದಪುರದಿಂದ ಥಣಿಸಂದ್ರದ ಕಡೆ ಹೋಗುತ್ತಾ ಇದ್ದರು.

ನಿಘಾರ್‌ ಸುಲ್ತಾನ್ ಹಾಗೂ ಇರ್ಫಾನ್ ಟಿವಿಎಸ್ ಜೂಬಿಟರ್ ಸ್ಕೂಟಿಯಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಾ ಇದ್ದರು. ಝೂಡಿಯೋ ಮುಂಭಾಗ ಸ್ಕೂಟಿ ಮುಂದೆ ಹೋಗುತ್ತಿದ್ದ ಕಾರು ಸಡನ್ ಆಗಿ ನಿಂತಿದೆ. ಆಗ ಗಾಬರಿಯಿಂದ ಮಹಿಳೆಯರು ಬಲಕ್ಕೆ ತೆಗೆದುಕೊಂಡಿದ್ದಾರೆ. ಆಗ ಹಿಂಭಾಗದಿಂದ ವೇಗವಾಗಿ ಬಂದ ಕಸದ ಲಾರಿ ಡಿಕ್ಕಿಯಾಗಿದೆ.

ಕಸದ ಲಾರಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ರಸ್ತೆ ಮೇಲೆ ಬಿದ್ದಿದ್ದಾರೆ. ಆಗ ಲಾರಿಯ ಎಡಭಾಗದ ಮುಂದಿನ ಚಕ್ರ ಹರಿದು ನಿಘಾರ್ ಸುಲ್ತಾನ್, ನಿಘಾರ್ ಇರ್ಫಾನ್ ಇಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಲಾರಿ ಡ್ರೈವರ್ ನಿರ್ಲಕ್ಷ್ಯದಿಂದ ಈ ಅಪಘಾತ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಬಿಬಿಎಂಪಿ ಕಸದ ಲಾರಿ ಚಾಲಕ ಗಾಡಿಲಿಂಗ ಎಂಬುವವರನ್ನ ಹೆಣ್ಣೂರು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!