ಕೇಜ್ರಿವಾಲ್ ವಿದ್ಯುತ್ ಬಿಲ್ ಮನ್ನಾ ಘೋಷಣೆಗೆ ಠಕ್ಕರ್: ದೆಹಲಿ ಜನರಿಗೆ ಫ್ರೀ ಕರೆಂಟ್ ಎಂದ ಕಾಂಗ್ರೆಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಕಾಂಗ್ರೆಸ್​​ ಪಕ್ಷವು ಈ ಬಾರಿಯು ಗ್ಯಾರಂಟಿ ಮೊರೆ ಹೋಗಿದೆ.

ದೆಹಲಿ ಜನತೆಗೆ ಕಾಂಗ್ರೆಸ್​​ ಐದು ಗ್ರಾರೆಂಟಿ ಯೋಜನೆಗಳನ್ನು ಘೋಷಿಸಲು ಸಿದ್ದವಾಗಿದ್ದು, ಮಹಿಳಾ ಹಾಗೂ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಈ ಯೋಜನೆಗಳನ್ನು ರೂಪಿಸಿದೆ ಎನ್ನಲಾಗಿದೆ.

ಐದು ಗ್ಯಾರಂಟಿ ಯೋಜನೆಗಳು
1.ಮಹಿಳೆಯರಿಗೆ ನೇರ ನಗದು ವರ್ಗಾವಣೆ: ಮಹಿಳಾ ಮತದಾರರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ನೇರ ನಗದು ವರ್ಗಾವಣೆ ಯೋಜನೆಯನ್ನು ಪರಿಚಯಿಸಲು ಯೋಜಿಸಿದೆ ಎನ್ನಲಾಗಿದೆ.

2.ಇನ್ಷ್ಯೂರೆನ್ಸ್: ಕೇಂದ್ರಾಡಳಿತ ಪ್ರದೇಶದ ಎಲ್ಲ ನಾಗರಿಕರಿಗೂ 20 ರಿಂದ 25 ಲಕ್ಷ ಮೊತ್ತದ ಹೆಲ್ತ್​ ಇನ್ಷ್ಯೂರೆನ್ಸ್ ಪ್ಲಾನ್​ ಮಾಡಿದೆ.

3.ನಿರುದ್ಯೊಗಿಗಳಿಗೆ ಧನ ಸಹಾಯ: ಕರ್ನಾಟಕದ ಯುವನಿಧಿ ಕಾರ್ಯಕ್ರಮದಂತೆ ದೆಹಲಿಯಲ್ಲಿಯೂ ಸಹ ನಿರುದ್ಯೊಗಿ ಯವಕ – ಯುವತಿಯರಿಗೆ ಧನ ಸಹಾಯದ ಜೊತೆಗೆ ತರಬೇತಿ ಕಾರ್ಯಕ್ರಮವನ್ನು ಸಹ ಯೋಜಿಸಿದೆ ಎನ್ನಲಾಗಿದೆ.

4.ಉಚಿತ ವಿದ್ಯುತ್: ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಯಂತೆ ದೆಹಲಿಯ ನಿವಾಸಿಗಳಿಗೂ 400 ವ್ಯಾಟ್​ ತನಕ ಉಚಿತ ​​ ವಿದ್ಯುತ್ ಅನ್ನು ಘೋಷಿಸಲಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಮತ್ತೊಮ್ಮೆ ಸರ್ಕಾರ ರಚಿಸಿದ ನಂತರ ವಿದ್ಯತ್​ ಬಿಲ್​ ಅನ್ನು ಸಂಪೂರ್ಣವಾಗಿ ಮನ್ನಮಾಡುವುದಾಗಿ ಘೋಷಿಸಿದರು.

5.ಉಚಿತ ರೇಷನ್​​: ದೆಹಲಿಯಲ್ಲಿ ರೇಷನ್​ ಕಾರ್ಡ್​​ ಹೊಂದಿರುವವರಿಗೆ ವಿಶೇಷವಾದ ರೇಷನ್​ ನೀಡಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಇದರಲ್ಲಿ ಅಕ್ಕಿ, ಅಡುಗೆ ಎಣ್ಣೆ ಹಾಗೂ ಇತರೆ ದೈನಂದಿನ ವಸ್ತುಗಳು ಇರಲಿವೆ ಎನ್ನಲಾಗಿದೆ.

ದೆಹಲಿಯಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ರೂಪಿಸರುವ ಕಾಂಗ್ರೆಸ್​​ ಕರ್ನಾಟಕ ಹಾಗೂ ತೆಲಂಗಾಣದಲ್ಲಿಯೂ ಇದೇ ತರಹದ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಗೆಲುವು ಸಾಧಿಸಿತ್ತು. ಆದರೆ ಕಳೆದ ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ತರಹದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರು ಸಹ ಅವುಗಳು ಕೈಹಿಡಿಯಲಿಲ್ಲ. ಇನ್ನು ಸೊಮವಾರದಿಂದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಈ ಗ್ಯಾರಂಟೆ ಯೋಜನೆಗಳನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here