ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಾಭರಣ ಪಡೆದು ಹಣ ನೀಡಿದೇ ವಂಚನೆ ಕೇಸ್ ನಲ್ಲಿ ಐಶ್ವರ್ಯಗೌಡ ಹಾಗೂ ಅವರ ಪತಿಯನ್ನು ಬಂಧಿಸಲಾಗಿತ್ತು. ಇದೀಗ ಹೈಕೋರ್ಟ್ ವಂಚನೆ ಕೇಸಲ್ಲಿ ಜಾಮೀನು ಮಂಜೂರು ಮಾಡಿದೆ.
ಹೀಗಾಗಿ ಪೊಲೀಸರು ಅವರನ್ನು ಬಿಡುಗಡೆ ಮಾಡಿರುವುದಾಗಿ ತಿಳಿದು ಬಂದಿದೆ.
ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಶಿಲ್ವಗೌಡ ಎಂಬುವರು 3.50 ಕೋಟಿ ಬೆಲೆ ಬಾಳುವ 430 ಗ್ರಾಂ ಚಿನ್ನಾಭರಣ ಪಡೆದು ಹಣ ನೀಡದೆ ವಂಚಿಸಿರುವುದಾಗಿ ಐಶ್ವರ್ಯಗೌಡ ಹಾಗೂ ಅವರ ಪತಿ ವಿರುದ್ಧ ದೂರು ನೀಡಿದ್ದರು.ಈ ದೂರಿನ ಹಿನ್ನಲೆಯಲ್ಲಿ ಐಶ್ವರ್ಯಗೌಡ ಹಾಗೂ ಅವರ ಪತಿಯನ್ನು ಬಂಧಿಸಲಾಗಿತ್ತು.
ಇದೀಗ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.