ಟಿಬೆಟ್‌ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ: ಕಟ್ಟಡಗಳು ಕುಸಿತ, 32 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳ-ಟಿಬೆಟ್ ಗಡಿಯಲ್ಲಿ ಇಂದು ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 6.8ರಷ್ಟು ಭೂಕಂಪ ಸಂಭವಿಸಿದೆ. ಭೂಕಂಪವು ಟಿಬೆಟ್‌ನಲ್ಲಿ ಸಂಭವಿಸಿದೆ, ಆದರೆ ಚೀನಾ, ನೇಪಾಳ ಮತ್ತು ಉತ್ತರ ಭಾರತದ ಹಲವು ಭಾಗಗಳಲ್ಲಿಯೂ ಸಹ ಕಂಪನದ ಅನುಭವವಾಗಿದೆ.

ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪವು ಬೆಳಿಗ್ಗೆ 6:35 ಕ್ಕೆ ಸಂಭವಿಸಿದೆ. ಟಿಬೆಟ್‌ನ ಕ್ಸಿಜಾಂಗ್ ಕೇಂದ್ರಬಿಂದುವಾಗಿದೆ.

32 ಮಂದಿ ಸಾವನ್ನಪ್ಪಿದ್ದು, 38 ಮಂದಿ ಗಾಯಗೊಂಡಿದ್ದಾರೆ ಎಂದು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!