ದಿನಭವಿಷ್ಯ: ಆಸ್ತಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ

ಮೇಷ
ಪ್ರೀತಿಯ ವಿಚಾರ ದಲ್ಲಿ ನಿಮಗೆ ಪೂರಕ ಬೆಳವಣಿಗೆ. ಅಡ್ಡಿ ನಿವಾರಣೆ. ಹಣಕಾಸು ಪರಿಸ್ಥಿತಿ ತುಸು ಸಂಕಷ್ಟ ತಂದೊಡ್ಡಬಹುದು.

ವೃಷಭ
ನಿಮಗಿಂದು ಯಶಸ್ವೀ ದಿನ. ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ನಿಮಗೆ ಪೂರಕ ಬೆಳವಣಿಗೆ. ಮಾನಸಿಕ ತುಮುಲ ನಿವಾರಣೆ.

ಮಿಥುನ
ಪ್ರತಿಸ್ಪರ್ಧಿಗಳು ನಿಮ್ಮ  ಕುರಿತಂತೆ ಅಪಪ್ರಚಾರ ನಡೆಸುತ್ತಾರೆ. ಕೆಲಸಕ್ಕೆ ವಿಘ್ನ. ವ್ಯವಹಾರದಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಆರ್ಥಿಕ ಒತ್ತಡ.

ಕಟಕ
ನಿಮ್ಮ ಕಾರ್ಯ
ವೈಖರಿ ಹಲವರ ಗಮನ ನಿಮ್ಮತ್ತ. ಒತ್ತಡ ನಿವಾರಣೆ. ಬಯಸಿದ ವ್ಯಕ್ತಿಯೊಬ್ಬರ ಶ್ಲಾಘನೆ ನಿಮಗೆ  ಹರ್ಷ ತರುವುದು.

ಸಿಂಹ
ಕೆಲವು ಪರಿಸ್ಥಿತಿ ಗಳನ್ನು ಎಂದಿನಂತೆ ನಿಭಾಯಿಸಲಾಗದು. ಅದಕ್ಕೆ ನೀವು ಭಿನ್ನ ದಾರಿ ಹುಡುಕಬೇಕು. ಸೂಕ್ತ ನೆರವೂ ಪಡೆದುಕೊಳ್ಳಿ.

ಕನ್ಯಾ
ನಿಮಗಿಂದು ಯಶಸ್ಸು ಕಾದಿದೆ. ಹಾಗಾಗಿ ಈ ದಿನವನ್ನು ಸದುಪಯೋಗ ಮಾಡಿ ಕೊಳ್ಳಿ. ಪೂರೈಸ ಬೇಕಾದ ವ್ಯವಹಾರ ಮುಗಿಸಿಕೊಳ್ಳಿ.

ತುಲಾ
ಸಣ್ಣಪುಟ್ಟ ಹಿನ್ನಡೆಗಳಿಗೆ ಬಾಗದೆ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿ. ಖಂಡಿತಾ ನಿಮಗೆ ಯಶ ಸಿಗುವುದು. ಕೌಟುಂಬಿಕ ಸಮಾಧಾನ.

ವೃಶ್ಚಿಕ
ಒತ್ತಡಗಳಿಂದ ಪಾರಾಗಲು ದಾರಿ ಹುಡುಕುವಿರಿ. ಆದರೆ ಅವಕಾಶ ದೊರಕದು. ಮತ್ತದೇ ದಿನವಹಿ ಕಾರ್ಯದ ಜಂಜಾಟ.

ಧನು
ಆಪ್ತರೊಂದಿಗೆ ದಿನ ಕಳೆಯುವ ಅವಕಾಶ. ವೃತ್ತಿ ಕಾರ್ಯಗಳಿಂದು ಹಿನ್ನೆಲೆಗೆ ಸರಿಯುತ್ತವೆ. ಆರ್ಥಿಕ ಮುಗ್ಗಟ್ಟು ನಿವಾರಣೆ, ಆರ್ಥಿಕ ಸಹಾಯ.

ಮಕರ
ವೃತ್ತಿಯಲ್ಲಿ ಮೇಲೇರಲು ನಿಮಗೆ ಆಪ್ತರ ಸಹಾಯ ಒದಗು ವುದು. ಸಣ್ಣ ಕ್ಲೇಶಗಳು ಬಾಧಿಸಿದರೂ ಅಪರಾಹ್ನದ  ಬಳಿಕ ನಿವಾರಣೆ.

ಕುಂಭ
ಸಮಾಧಾನದ ವ್ಯಕ್ತಿಯಾದ ನೀವು ಇಂದು ಕೋಪದಿಂದ ಸಿಡಿಯುವ ಪ್ರಸಂಗ ಉದ್ಭವಿಸೀತು. ಪರಿಸ್ಥಿತಿ ಹದ ಮೀರದಿರಲಿ.

ಮೀನ
ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ. ಆ ಮೂಲಕ ನೀವು ಸಂತೋಷ ಪಡೆಯಬಲ್ಲಿರಿ. ಕಾಡುತ್ತಿರುವ ಕೊರಗನ್ನು ನಿರ್ಲಕ್ಷಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!