ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದನ್ ಶೆಟ್ಟಿಯ ಕಾಟನ್ ಕ್ಯಾಂಡಿ ಸಾಂಗ್ ಟ್ರೆಂಡಿಂಗ್‌ನಲ್ಲಿದೆ. ಆದರೆ ಈ ಸಾಂಗ್‌ನ ಪಲ್ಲವಿ ಹಾಗೂ ಚರಣ ಕದ್ದಿದ್ದು ಅನ್ನೋ ಆರೋಪ ಕೇಳಿ ಬಂದಿದೆ. 6 ವರ್ಷದ ಹಿಂದೆ ಸಾಂಗ್ ಮಾಡಿದ್ದ ರ‍್ಯಾಪರ್ ಯುವರಾಜ್ ಎಂಬುವವರು ಹಾಡನ್ನ ಕದ್ದು ಮಾಡುವ ಅವಶ್ಯಕತೆ ಚಂದನ್ಗೆ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘2025 ರ ಹೊಸ ವರ್ಷಕ್ಕೆ ರಿಲೀಸ್ ಆದ ಕಾಟನ್ ಕ್ಯಾಂಡಿ ಸಾಂಗ್ ಟ್ಯೂನ್ ನಾನು ಆರು ವರ್ಷದ ಹಿಂದೆ ಮಾಡಿದ ವೈ ಬುಲ್ ಪಾರ್ಟಿ ಸಾಂಗ್ ಟ್ಯೂನ್ ಒಂದೇ ಇದೆ. ಮೊದಲ ಪಲ್ಲವಿ, ಸೆಕೆಂಡ್ ಚರಣ ಕಾಪಿ ಮಾಡಿದ್ದಾರೆ ಚಂದನ್ ಶೆಟ್ಟಿ’ ಅಂತಾ ಆರೋಪ ಮಾಡಿದ್ದಾರೆ. ಆರು ವರ್ಷಗಳ ಹಿಂದೆ ತುಂಬಾನೇ ಕಷ್ಟಪಟ್ಟು ಹಣ ಕೂಡಿಟ್ಟು ರ‍್ಯಾಪ್ ಸಾಂಗ್ ಮಾಡಿದ್ದೀನಿ ಎಂದು ಹೇಳಿದ್ದಾರೆ.
ವೈ ಬುಲ್ ಯವರಾಜ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಆ ಟ್ಯೂನ್ ನಾನು ಮೊದಲೇ ಕೇಳಿದ್ರೆ, ನಾನು ಕಾಟನ್ ಕ್ಯಾಂಡಿ ಸಾಂಗ್ ಮಾಡ್ತಾನೇ ಇರ್ಲಿಲ್ಲ. ಈ ಸಾಂಗ್ ಕೇಳಿದಾಗ ಸೇಮ್ ಇದೆಯಲ್ಲ ಅಂತಾ ನಾನೇ ಶಾಕ್ ಆಗಿದ್ದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.