ಹೊಸದಿಗಂತ ಡಿಜಿಟಲ್ ಡೆಸ್ಕ್:
ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆ ಮೊಬೈಲ್ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತನಾಗಿರುವ ತಂದೆ ಮಗನ ಆಸೆ ಈಡೇರಿಸಲು ಸಾಧ್ಯವಾಗಲಿಲ್ಲ ಎಂಬ ನೋವಿನಿಂದ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಿಲೋಲಿ ತಹಸಿಲ್ನ ಮಿನಕಿಯಲ್ಲಿ ರೈತನೊಬ್ಬ ತನ್ನ ಮಗನಿಗೆ ಸ್ಮಾರ್ಟ್ಫೋನ್ ಖರೀದಿಸಲು ಸಾಧ್ಯವಾಗದ ಕಾರಣ ಮಗನೊಂದಿಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಂದೆ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಗುರುವಾರ ಬೆಳಗ್ಗೆ ಹತ್ತನೇ ತರಗತಿಯ ವಿದ್ಯಾರ್ಥಿ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿರುವುದನ್ನು ನೋಡಿದ ತಂದೆ, ಅದೇ ಮರಕ್ಕೆ ತಾನು ನೇಣು ಬಿಗಿದುಕೊಂಡಿದ್ದಾನೆ.
ಮೂರು ಸಹೋದರರಲ್ಲಿ ಕಿರಿಯವನಾದ ಬಾಲಕ ಮಕರ ಸಂಕ್ರಾಂತಿಗೆ ತನ್ನ ಹಾಸ್ಟೆಲ್ನಿಂದ ಮನೆಗೆ ಬಂದಿದ್ದ. ತನ್ನ ಶೈಕ್ಷಣಿಕ ಉದ್ದೇಶಗಳಿಗಾಗಿ ಸ್ಮಾರ್ಟ್ಫೋನ್ ಕೊಡಿಸುವಂತೆ ತಂದೆಗೆ ಕೇಳಿಕೊಂಡಿದ್ದ. ಆದರೆ ಹಣದ ಸಮಸ್ಯೆಯಿಂದಾಗಿ ತಂದೆಗೆ ಮೊಬೈಲ್ ಖರೀದಿಸಲು ಸಾಧ್ಯವಾಗಿರಲಿಲ್ಲ.
ಈ ಸಂಬಂಧ ನಾಂದೇಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.